ಶುಕ್ರವಾರ, ಅಕ್ಟೋಬರ್ 22, 2021
20 °C

ರಿಲಯನ್ಸ್‌ನಿಂದ ಎಲೆಕ್ಟ್ರಾನಿಕ್ಸ್ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಲಯನ್ಸ್ ಡಿಜಿಟಲ್ ಕಂಪನಿಯು ‘ಎಲೆಕ್ಟ್ರಾನಿಕ್ಸ್‌ ಹಬ್ಬ’ ಹೆಸರಿನಲ್ಲಿ ಮಾರಾಟ ಮೇಳವೊಂದನ್ನು ಆಯೋಜಿಸಿದೆ. ಇದು ಅಕ್ಟೋಬರ್ 3ರಿಂದ (ಭಾನುವಾರ) ರಿಲಯನ್ಸ್‌ ಡಿಜಿಟಲ್ ಮಳಿಗೆಗಳಲ್ಲಿ, ಮೈಜಿಯೊ ಸ್ಟೋರ್‌ಗಳಲ್ಲಿ ಹಾಗೂ www.reliancedigital.in ಆನ್‌ಲೈನ್‌ ಮಳಿಗೆಯಲ್ಲಿ ಶುರುವಾಗಲಿದೆ.

ಈ ಮಾರಾಟ ಮೇಳದಲ್ಲಿ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ತಕ್ಷಣ ಶೇಕಡ 10ರಷ್ಟು ವಿನಾಯಿತಿ (ಗರಿಷ್ಠ ₹ 2,000ವರೆಗೆ) ಸಿಗಲಿದೆ. ಈ ಕೊಡುಗೆಯು ಭೌತಿಕ ಮಳಿಗೆಗಳಲ್ಲಿ ಅಕ್ಟೋಬರ್ 3ರಿಂದ 12ರವರೆಗೆ, reliancedigital.inನಲ್ಲಿ ಅ. 3ರಿಂದ 10ರವರೆಗೆ ಲಭ್ಯವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪೇಟಿಎಂ ಮೂಲಕ ಕನಿಷ್ಠ ₹ 4,999 ಪಾವತಿಸಿದರೆ, ಗರಿಷ್ಠ ₹ 1,000ವರೆಗೆ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಟಿ.ವಿ., ರೆಫ್ರಿಜರೇಟರ್‌, ವಾಷಿಂಗ್ ಮೆಷಿನ್, ಲ್ಯಾಪ್‌ಟಾಪ್‌ ಮತ್ತು ಕೆಲವು ಗೃಹೋಪಯೋಗಿ ಉಪಕರಣಗಳ ಮೇಲೆ ವಿಶೇಷ ಕೊಡುಗೆಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು