ಶುಕ್ರವಾರ, ಜೂನ್ 18, 2021
21 °C

ರಿಲಯನ್ಸ್ ಹೋಮ್ ಫೈನಾನ್ಸ್‌ ನಷ್ಟ ₹ 445 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಸಂಸ್ಥೆಯ ನಿವ್ವಳ ನಷ್ಟವು 2020–21ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಅಂತ್ಯಕ್ಕೆ ₹ 444.62 ಕೋಟಿಗಳಷ್ಟಾಗಿದೆ.

2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟ ₹ 238.37 ಕೋಟಿಗಳಷ್ಟಿತ್ತು. ಇದು ಅನಿಲ ಅಂಬಾನಿ ನಿಯಂತ್ರಣದ ರಿಲಯನ್ಸ್‌ ಕ್ಯಾಪಿಟಲ್‌ನ ಅಂಗಸಂಸ್ಥೆಯಾಗಿದೆ. ವರಮಾನವು ₹ 281 ಕೋಟಿಗಳಿಂದ ₹ 162 ಕೋಟಿಗಳಿಗೆ ಶೇ 42ರಷ್ಟು ಕುಸಿತ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

2020–21ನೇ ಹಣಕಾಸು ವರ್ಷಕ್ಕೆ ಕಂಪನಿಯ ನಿವ್ವಳ ನಷ್ಟವು ₹ 375 ಕೋಟಿಗಳಿಂದ ₹ 1,519 ಕೋಟಿಗಳಿಗೆ ಮೂರುಪಟ್ಟು ಹೆಚ್ಚಾಗಿದೆ. ಒಟ್ಟಾರೆ ವರಮಾನ ₹ 1,602 ಕೋಟಿಗಳಷ್ಟು ಇದ್ದಿದ್ದು ₹ 840 ಕೋಟಿಗಳಿಗೆ ಇಳಿಕೆ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು