ಗುರುವಾರ , ಸೆಪ್ಟೆಂಬರ್ 23, 2021
28 °C

14ನೇ ವರ್ಷಾಚರಣೆ ಸಂಭ್ರಮದಲ್ಲಿ ರಿಲಯನ್ಸ್‌ ಜುವೆಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಿಲಯನ್ಸ್‌ ಜುವೆಲ್ಸ್‌ ತನ್ನ 14ನೇ ವರ್ಷಾಚರಣೆಯ ಸಲುವಾಗಿ ಚಿನ್ನಾಭರಣಗಳ ವಿಶೇಷ ಸಂಗ್ರಹವಾಗಿರುವ ‘ಆಭಾರ್‌’ಗೆ ಚಾಲನೆ ನೀಡಿದೆ. #ರಿಶ್ತೋನ್ಕಿಧಾಗಾ ಎಂಬ ಹೆಸರಿನಲ್ಲಿ ಗ್ರಾಹಕರು, ಉದ್ಯೋಗಿಗಳು ಮತ್ತು ಕುಶಲಕರ್ಮಿಗಳಿಗೆ ಕೃತಜ್ಞತೆ ಸಲ್ಲಿಸಿದೆ.

ಸಂಗ್ರಹವು ವಿಶಿಷ್ಟವಾದ ಕರಕುಶಲ ಚಿನ್ನ ಮತ್ತು ವಜ್ರದ ಕಿವಿಯೋಲೆ ವಿನ್ಯಾಸಗಳನ್ನು ಒಳಗೊಂಡಿದೆ. ಇದು ಡ್ಯಾಂಗ್ಲರ್‌ಗಳು, ಫ್ರಿಂಜ್‌ಗಳು, ಟಾಪ್ ಮತ್ತು ಡ್ರಾಪ್ಸ್, ಜುಮ್ಕಿ, ಸ್ಟಡ್ಸ್‌ಗಳ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳನ್ನು ಒಳಗೊಂಡಿದೆ.

ಕಂಪನಿಯು ಗ್ರಾಹಕರಿಗೆ ಸೆಪ್ಟೆಂಬರ್‌ 1ರವರೆಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು, ಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್ ಮತ್ತು ವಜ್ರದ ಆಭರಣಗಳ ಮೌಲ್ಯದ ಮೇಲೆ ಶೇ 20ರಷ್ಟು ವಿನಾಯಿತಿಯನ್ನೂ ಅದು ಒಳಗೊಂಡಿದೆ.

‘ಇಷ್ಟು ವರ್ಷ ನಮ್ಮನ್ನು ಬೆಂಬಲಿಸಿದ ಮತ್ತು ವಿಶ್ವಾಸ ತೋರಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳಲು ಬಯಸುತ್ತೇವೆ’ ಎಂದು ರಿಲಯನ್ಸ್‌ ಜುವೆಲ್ಸ್‌ನ ಸಿಇಒ ಸುನಿಲ್‌ ನಾಯಕ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.