ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 54 ನಗರದಲ್ಲಿ ಜಿಯೊ ಏರ್‌ ಫೈಬರ್‌ ಸೇವೆ

Published 24 ನವೆಂಬರ್ 2023, 16:27 IST
Last Updated 24 ನವೆಂಬರ್ 2023, 16:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 54 ನಗರಗಲ್ಲಿ ಜಿಯೊ ಏರ್‌ ಫೈಬರ್‌ ಸೇವೆಯನ್ನು ಆರಂಭಿಸಿರುವುದಾಗಿ  ರಿಲಯನ್ಸ್‌ ಜಿಯೊ ಕಂಪನಿಯು ಶುಕ್ರವಾರ ತಿಳಿಸಿದೆ. 

ಜಿಯೊ ಏರ್‌ ಫೈಬರ್‌ನ 30 ಎಂಬಿಪಿಎಸ್‌ ವೇಗದ ಅನಿಯಮಿತ ಡೇಟಾ ₹599, 100 ಎಂಬಿಪಿಎಸ್‌ ವೇಗದ ಪ್ಲಾನ್‌ ₹899 ಮತ್ತು ₹1,199ಕ್ಕೆ ಲಭ್ಯವಿದೆ. 14 ಒಟಿಟಿ ಆ್ಯಪ್‌ ₹599 ಹಾಗೂ ₹899ಕ್ಕೆ ದೊರೆಯಲಿದೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಮತ್ತು ಜಿಯೊ ಸಿನಿಮಾ ಪ್ರೀಮಿಯಂ ಸೇರಿದಂತೆ 17 ಒಟಿಟಿ ಪ್ಲಾಟ್‌ಫಾರಂಗಳು ₹1,199ಕ್ಕೆ ಸಿಗಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.‌

3 ಬ್ಯಾಂಕ್‌ಗೆ ಒಟ್ಟು ₹10.34 ಕೋಟಿ ದಂಡ

ಮುಂಬೈ (ಪಿಟಿಐ): ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಸಿಟಿ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಿಗೆ ಒಟ್ಟು ₹10.34 ಕೋಟಿ ದಂಡ ವಿಧಿಸಿದೆ.

ಸಿಟಿ ಬ್ಯಾಂಕ್‌ಗೆ ₹5 ಕೋಟಿ, ಬ್ಯಾಂಕ್ ಆಫ್ ಬರೋಡಕ್ಕೆ ₹4.34 ಕೋಟಿ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ₹ 1 ಕೋಟಿ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಅಭ್ಯುದಯ ಕೋ–ಅಪರೇಟಿವ್‌ ಬ್ಯಾಂಕ್‌ನ ಮಂಡಳಿ ಸೂಪರ್‌ಸೀಡ್
ಮುಂಬೈ (ಪಿಟಿಐ): ಅಭ್ಯುದಯ ಕೋ–ಆಪರೇಟಿವ್ ಬ್ಯಾಂಕ್‌ನ ಆಡಳಿತ ವ್ಯವಸ್ಥೆ ದುರ್ಬಲ ಆಗಿರುವುದರಿಂದ ಅದರ ಆಡಳಿತ ಮಂಡಳಿಯನ್ನು ಒಂದು ವರ್ಷದವರೆಗೆ ಸೂಪರ್‌ಸೀಡ್ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಎಸ್‌ಬಿಐನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸತ್ಯಪ್ರಕಾಶ್ ಪಾಠಕ್‌ ಅವರನ್ನು ಒಂದು ವರ್ಷಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದೆ. ಆಡಳಿತಾಧಿಕಾರಿಗೆ ನೆರವಾಗಲು ಸಲಹಾ ಸಮಿತಿಯೊಂದನ್ನೂ ಆರ್‌ಬಿಐ ನೇಮಿಸಿದೆ.

ಬ್ಯಾಂಕಿನ ಕಾರ್ಯವೈಖರಿಯ ಮೇಲೆ ಯಾವುದೇ ತರಹದ ನಿರ್ಬಂಧಗಳನ್ನು ವಿಧಿಸಿಲ್ಲ. ಆಡಳಿತಾಧಿಕಾರಿಯ ಮಾರ್ಗದರ್ಶನದ ಅಡಿಯಲ್ಲಿ ಎಂದಿನಂತೆಯೇ ಬ್ಯಾಂಕಿಂಗ್ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT