ಶನಿವಾರ, ನವೆಂಬರ್ 26, 2022
23 °C

ರಿಲಯನ್ಸ್ ಜಿಯೊದಿಂದ ದೀಪಾವಳಿ ವೇಳೆಗೆ ನಾಲ್ಕು ನಗರಗಳಲ್ಲಿ 5ಜಿ ಸೇವೆ

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ದೀಪಾವಳಿ ವೇಳೆಗೆ ದೇಶದ ನಾಲ್ಕು ನಗರಗಳಲ್ಲಿ ರಿಲಯನ್ಸ್ ಜಿಯೊ 5ಜಿ ಸೇವೆ ಆರಂಭಿಸಲಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಸೋಮವಾರ ತಿಳಿಸಿದ್ದಾರೆ.

ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳಲ್ಲಿ ದೀಪಾವಳಿ ವೇಳೆಗೆ ರಿಲಯನ್ಸ್ ಜಿಯೊ 5ಜಿ ಸೇವೆ ಆರಂಭಿಸಲಿದೆ. 2023ರ ಡಿಸೆಂಬರ್‌ ಒಳಗಾಗಿ ಇಡೀ ದೇಶದಲ್ಲಿ 5ಜಿ ಸೇವೆ ಒದಗಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ರಿಲಯನ್ಸ್ ಜಿಯೊದ ಷೇರುದಾರರ 45ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘5ಜಿ ಬಳಸಿಕೊಂಡು ಉತ್ತಮ ಗುಣಮಟ್ಟದ, ಕೈಗೆಟಕುವ ದರದ ಸ್ಥಿರ ಬ್ರಾಡ್‌ಬ್ರ್ಯಾಂಡ್‌ ಸೇವೆಗಳ ವೇಗ ವೃದ್ಧಿಸಬಹುದು’ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಮೇಲೆ ಒತ್ತಡವಿದೆ. ಅದರ ಹೊರತಾಗಿಯೂ, ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿಯೂ ಭಾರತ ಸ್ಥಿರ ಬೆಳವಣಿಗೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು