ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಒಳಹರಿವು ಹೆಚ್ಚಳ -ಮುಂಚೂಣಿಯಲ್ಲಿ ಭಾರತ

Last Updated 9 ಏಪ್ರಿಲ್ 2019, 17:12 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿದೇಶಗಳಲ್ಲಿ ನೆಲೆಸಿರುವವರು ತಾಯ್ನಾಡಿಗೆ ರವಾನಿಸುವ ಹಣದ ಪ್ರಯೋಜನ ಪಡೆಯುವಲ್ಲಿ ಭಾರತ 2018ರಲ್ಲಿಯೂ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಚೀನಾ, ಮೆಕ್ಸಿಕೊ, ಫಿಲಿಪ್ಪೀನ್ಸ್‌ ಮತ್ತು ಈಜಿಪ್ಟ್‌ ನಂತರದ ಸ್ಥಾನದಲ್ಲಿವೆ.

2018ರಲ್ಲಿ ವಿವಿಧ ದೇಶಗಳಿಂದ ಭಾರತಕ್ಕೆ ಬಂದಿರುವ ಹಣದ ಒಟ್ಟು ಮೌಲ್ಯ ₹ 5.45 ಲಕ್ಷ ಕೋಟಿ ಇದೆ.2017ರಲ್ಲಿ ಹೀಗೆ ಹರಿದು ಬಂದ ಹಣದ ಒಟ್ಟು ಮೌಲ್ಯ ₹ 4.50 ಲಕ್ಷ ಕೋಟಿ ಇತ್ತು.

ಭಾರತಕ್ಕೆ ಹಣ ರವಾನೆ 2018ರಲ್ಲಿ ಶೇ 14ಕ್ಕೂ ಹೆಚ್ಚು ಏರಿಕೆಯಾಗಿದೆ. ಕೇರಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಅವರ ಸದಸ್ಯರು ಆರ್ಥಿಕ ನೆರವು ನೀಡಿದ್ದರಿಂದ ರವಾನೆ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂದು ವಿಶ್ವ ಬ್ಯಾಂಕ್‌ ವರದಿಯಲ್ಲಿ ತಿಳಿಸಿದೆ.

ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ ದಾಖಲೆ ಪ್ರಮಾಣದ ಅಂದರೆ ₹ 36.50 ಲಕ್ಷ ಕೋಟಿ ಹಣ ರವಾನೆಯಾಗಿದೆ. 2017ಕ್ಕೆ ಹೋಲಿಸಿದರೆ ಇದುಶೇ 9.6ರಷ್ಟು ಏರಿಕೆಯಾಗಿದೆ. ಗರಿಷ್ಠ ಆದಾಯ ಹೊಂದಿರುವ ದೇಶಗಳನ್ನೂ ಒಳಗೊಂಡು ಜಾಗತಿಕ ಹಣ ರವಾನೆ ಸ್ವೀಕಾರದ ಮೊತ್ತ ₹ 47.54 ಲಕ್ಷ ಕೋಟಿಗಳಷ್ಟಿದೆ. 2017ರಲ್ಲಿ ₹ 43.67 ಲಕ್ಷ ಕೋಟಿ ಇತ್ತು.

ಏನಿದು ಹಣ ರವಾನೆ: ವಿದೇಶದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯು ಭಾರತದಲ್ಲಿರುವ ತನ್ನ ಕುಟುಂಬದ ನಿರ್ವಹಣೆಗೆ ಹಣ ಕಳುಹಿಸುವುದು. ಇಲ್ಲವೆ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗ /ಮಗಳಿಗೆ ಭಾರತದಲ್ಲಿರುವ ಪೋಷಕರು ಹಣ ಕಳುಹಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT