ಬೆಂಗಳೂರು: ಫ್ರಾನ್ಸ್ನ ಕಾರು ತಯಾರಕಾ ಕಂಪನಿ ರೆನೊ ಸಮೂಹದ ರೆನೊ ಇಂಡಿಯಾ ಹೊಸ ‘ರೆನೊ ಕೈಗರ್’ ಕಾರು ಬಿಡುಗಡೆ ಮಾಡಿದೆ.

ಸುಧಾರಿತ 100 ಪಿಎಸ್ ಟರ್ಬೊಚಾರ್ಜ್ಡ್ ಎಂಜಿನ್ ಮತ್ತು 35ಕ್ಕೂ ಹೆಚ್ಚು ಸುಧಾರಣೆಗಳನ್ನು ಹೊಂದಿರುವ ಈ ಎಸ್ಯುವಿ ಅತ್ಯುತ್ಕೃಷ್ಟ ಕಾರ್ಯಕ್ಷಮತೆ, ಅತ್ಯುತ್ತಮವಾದ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಕೈಗರ್ ಆಕರ್ಷಕ ವಿನ್ಯಾಸ, ಸ್ಮಾರ್ಟ್ ತಂತ್ರಜ್ಞಾನ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಇದನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದು ವಿವಿಧ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಟರ್ಬೊ ಕೈಗರ್ ವೇರಿಯಂಟ್ಗಳಾದ ಟೆಕ್ನೋ ಮತ್ತು ಇಮೋಷನ್ಗೆ ₹9.99 ಲಕ್ಷದಿಂದ ₹11.29 ಲಕ್ಷದವರೆಗೆ (ಎಕ್ಸ್ ಷೋರೂಂ) ಬೆಲೆಯಿದೆ. ಇದರ ಜೊತೆಗೆ ಹೆಚ್ಚು ಕೈಗೆಟುಕುವ ದರದ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ವೇರಿಯಂಟ್ಗಳು ₹6.29 ಲಕ್ಷದಿಂದ ₹9.14 ಲಕ್ಷದವರೆಗಿನ (ಎಕ್ಸ್ ಷೋರೂಂ) ಬೆಲೆಯಲ್ಲಿ ಲಭ್ಯವಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಕಾರು ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಓಯಸಿಸ್ ಯೆಲ್ಲೋ ಮತ್ತು ಶಾಡೋ ಗ್ರೇ ಎಂಬ ಎರಡು ಹೊಸ ಬಣ್ಣಗಳನ್ನು ಸೇರಿಸಲಾಗಿದೆ. ಜೊತೆಗೆ ರೇಡಿಯಂಟ್ ರೆಡ್, ಕ್ಯಾಸ್ಪಿಯನ್ ಬ್ಲೂ, ಐಸ್ ಕೂಲ್ ವೈಟ್, ಮೂನ್ಲೈಟ್ ಸಿಲ್ವರ್, ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಕಾರು ದೊರೆಯಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.