ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2000 ನೋಟುಗಳ ವಿನಿಮಯಕ್ಕೆ ಒಂದು ದಿನ ಬಾಕಿ: ಚಲಾವಣೆಯಲ್ಲಿ ₹12,000 ಕೋಟಿ

Published 6 ಅಕ್ಟೋಬರ್ 2023, 9:45 IST
Last Updated 6 ಅಕ್ಟೋಬರ್ 2023, 9:45 IST
ಅಕ್ಷರ ಗಾತ್ರ

ಮುಂಬೈ: ₹2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ. ಸದ್ಯ, ಸುಮಾರು ₹12,000 ಕೋಟಿ (ಅಥವಾ 3.37 ಪ್ರತಿಶತ) ಕರೆನ್ಸಿ ನೋಟುಗಳು ಮಾತ್ರ ಚಲಾವಣೆಯಲ್ಲಿ ಉಳಿದಿವೆ ಎಂದೂ ಅವರು ತಿಳಿಸಿದ್ದಾರೆ.

₹2000 ಮುಖ ಬೆಲೆಯ ಶೇ 96ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಆಗಿವೆ ಎಂದಿದ್ದಾರೆ.

‘₹2000 ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ಈವರೆಗೆ ₹3.43 ಲಕ್ಷ ಕೋಟಿ ನೋಟುಗಳು ಬ್ಯಾಂಕ್‌ಗಳಿಗೆ ಬಂದಿವೆ. ಕೇವಲ ₹12,000 ಕೋಟಿಯಷ್ಟು ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ಶೇಕಡ 87ರಷ್ಟು ನೋಟುಗಳು ಬ್ಯಾಂಕ್‌ನಲ್ಲಿ ಡೆಪಾಸಿಟ್ ಆಗಿದ್ದರೆ, ಉಳಿದ ಹಣ ವಿನಿಮಯ ಮಾಡಿಕೊಳ್ಳಲಾಗಿದೆ’ ಎಂದು ಆರ್‌ಬಿಐ ಹಣಕಾಸು ನೀತಿ ಪರಿಶೀಲನಾ ಸಭೆ ಬಳಿಕ ಶಕ್ತಿಕಾಂತ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

₹2000 ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿದ ದಿನ ಮೇ 19, 2023ರಂದು ದೇಶದಲ್ಲಿ ₹3.56 ಲಕ್ಷ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಈವರೆಗೆ ₹3.43 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಹಿಂದಿರುಗಿವೆ ಎಂದು ಅವರು ತಿಳಿಸಿದ್ದಾರೆ.

ನೋಟುಗಳ ವಿನಿಮಯ ಮತ್ತು ಠೇವಣಿ ಪೂರ್ಣಗೊಳಿಸಲು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಯವನ್ನು ಒದಗಿಸುವ ಉದ್ದೇಶಕ್ಕಾಗಿ ಸೆಪ್ಟೆಂಬರ್ 30 ಅನ್ನು ಆರಂಭದಲ್ಲಿ ಕೊನೆಯ ದಿನಾಂಕವೆಂದು ನಿರ್ಧರಿಸಲಾಗಿತ್ತು. ಬಳಿಕ, ಮತ್ತೊಮ್ಮೆ ಪರಿಶೀಲನೆ ನಡೆಸಿ ಅಕ್ಟೋಬರ್ 7ಕ್ಕೆ ವಿಸ್ತರಿಸಲಾಗಿತ್ತು ಎಂದೂ ದಾಸ್ ಹೇಳಿದರು.

‘ಅಕ್ಟೋಬರ್ 8, 2023ರಿಂದ ಜಾರಿಗೆ ಬರುವಂತೆ, ಬ್ಯಾಂಕ್‌ಗಳಲ್ಲಿ ₹2000 ಮುಖ ಬೆಲೆಯ ನೋಟುಗಳ ಠೇವಣಿ ಮತ್ತು ವಿನಿಮಯವನ್ನು ಸ್ಥಗಿತಗೊಳಿಸಲಾಗುತ್ತದೆ’ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT