ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿಗೆ ಮರಳಿದ ಶೇ 93ರಷ್ಟು ₹ 2000 ಮುಖಬೆಲೆಯ ನೋಟುಗಳು

Published 1 ಸೆಪ್ಟೆಂಬರ್ 2023, 12:50 IST
Last Updated 1 ಸೆಪ್ಟೆಂಬರ್ 2023, 12:50 IST
ಅಕ್ಷರ ಗಾತ್ರ

ಮುಂಬೈ: ಕಳೆದ ಮೇ 19ರಂದು ಹಿಂಪಡೆದಿದ್ದ ₹2000 ಮುಖಬೆಲೆಯ ನೋಟುಗಳಲ್ಲಿ ಆ. 31ರವರೆಗೆ ಶೇ 93ರಷ್ಟು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ವಿವಿಧ ಬ್ಯಾಂಕುಗಳ ಮಾಹಿತಿ ಅನ್ವಯ ₹2 ಸಾವಿರ ಮುಖಬೆಲೆಯ ₹3.32 ಲಕ್ಷ ಕೋಟಿ ಮೊತ್ತದ ನೋಟುಗಳ ಬ್ಯಾಂಕುಗಳಿಗೆ ಸಲ್ಲಿಕೆಯಾಗಿವೆ. ಆ. 31ರಂದು ₹24 ಸಾವಿರ ಕೋಟಿ ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿವೆ ಎಂದು ಆರ್‌ಬಿಐ ಹೇಳಿದೆ.

ಈವರೆಗೂ ಬ್ಯಾಂಕುಗಳಿಗೆ ಮರಳಿರುವ ನೋಟುಗಳಲ್ಲಿ ಶೇ 87ರಷ್ಟು ಠೇವಣಿ ರೂಪದಲ್ಲಿ ಸಲ್ಲಿಕೆಯಾಗಿವೆ. ಶೇ 13ರಷ್ಟು ವಿವಿಧ ಮುಖಬೆಲೆಯ ನೋಟುಗಳಿಗೆ ವಿನಿಮಯಗೊಂಡಿವೆ. 2023ರ ಮಾರ್ಚ್‌ 31ರವರೆಗೂ ₹3.62 ಲಕ್ಷ ಕೋಟಿಯಷ್ಟು ₹2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಮೇ 19ರ ಹೊತ್ತಿಗೆ ಇದು ₹3.56 ಲಕ್ಷ ಕೋಟಿಗೆ ಕುಸಿಯಿತು.

₹2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿ ಅದೇ ಮೌಲ್ಯದ ಇತರ ಮುಖಬೆಲೆಯ ನೋಟುಗಳನ್ನು ಪಡೆಯಲು ಸೆ. 30ರವರೆಗೂ ಅವಕಾಶವಿದೆ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT