ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ: ಬಡ್ಡಿ ದರ ಕಡಿತ

Last Updated 7 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ 0.15ರಷ್ಟು ಕಡಿಮೆ ಮಾಡಿದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಒಂದು ವರ್ಷ ಅವಧಿಯ ಬಡ್ಡಿ ದರವನ್ನು ಶೇ 0.15ರಷ್ಟು (ಶೇ 7.40 ರಿಂದ ಶೇ 7.25 ) ಕಡಿಮೆ ಮಾಡಿದೆ. ಇದೇ 10ರಿಂದ ಹೊಸ ದರ ಜಾರಿಗೆ ಬರಲಿದೆ.

ಇದರಿಂದಾಗಿ ‘ಎಂಸಿಎಲ್‌ಆರ್’ ಆಧರಿಸಿದ ಗೃಹ ಸಾಲಗಳ ಸಮಾನ ಮಾಸಿಕ ಕಂತು (ಇಎಂಐ) ಅಗ್ಗವಾಗಲಿದೆ. ₹ 25 ಲಕ್ಷ ಸಾಲದ 30 ವರ್ಷಗಳ ಮರು ಪಾವತಿ ಅವಧಿಯ ‘ಇಎಂಐ’ ಅಂದಾಜು ₹ 255ರಂತೆ ಕಡಿಮೆಯಾಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಹಿರಿಯರಿಗೆ ಹೊಸ ಠೇವಣಿ ಯೋಜನೆ: ಹಿರಿಯ ನಾಗರಿಕರಿಗಾಗಿ ಗರಿಷ್ಠ ಬಡ್ಡಿ ದರದ ವಿಶೇಷ ಠೇವಣಿ ಯೋಜನೆಯನ್ನೂ ಬ್ಯಾಂಕ್‌ ಪ್ರಕಟಿಸಿದೆ.

’ಎಸ್‌ಬಿಐ ವಿಕೇರ್‌ ಡಿಪಾಸಿಟ್‌’ ಹೆಸರಿನ ಹೊಸ ಠೇವಣಿ ಯೋಜನೆಯು ಸದ್ಯದ ಬಡ್ಡಿ ದರ ಕುಸಿತದ ಸಂದರ್ಭದಲ್ಲಿ ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಿಸಲಿದೆ.

5 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಸಾಮಾನ್ಯ ಗ್ರಾಹಕರಿಗೆ ಅನ್ವಯವಾಗುವ ಬಡ್ಡಿ ದರಕ್ಕಿಂತ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ಮತ್ತು 5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗೆ ಸಾಮಾನ್ಯ ಗ್ರಾಹಕರಿಗೆ ಅನ್ವಯವಾಗುವ ದರಕ್ಕಿಂತ ಶೇ 0.80ರಷ್ಟು (ಶೇ 0.30 ಎಕ್ಸ್‌ಟ್ರಾ ಪ್ರೀಮಿಯಂ) ಹೆಚ್ಚು ಬಡ್ಡಿ ದೊರೆಯಲಿದೆ. ಅವಧಿಗೆ ಮುಂಚೆಯೇ ಠೇವಣಿ ವಾಪಸ್‌ ಪಡೆದರೆ ಶೇ 0.30ರಷ್ಟು ಹೆಚ್ಚುವರಿ ಬಡ್ಡಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸೆಪ್ಟೆಂಬರ್‌ ಅಂತ್ಯದವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ.

ಎಫ್‌ಡಿ ಬಡ್ಡಿ ಇಳಿಕೆ: ಹಣಕಾಸು ಮಾರುಕಟ್ಟೆಯಲ್ಲಿ ಮತ್ತು ಬ್ಯಾಂಕ್‌ ಬಳಿ ಸಾಕಷ್ಟು ನಗದು ಇರುವುದರಿಂದ 3 ವರ್ಷಗಳ ಅವಧಿಯ ಸ್ಥಿರ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿ ದರವನ್ನು ಶೇ 0.20ರಷ್ಟು ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT