ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ (ಎಂಸಿಎಲ್‌ಆರ್) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಹೆಚ್ಚಿಸಿದೆ. ಇದರಿಂದ ವಾಹನ ಹಾಗೂ ವೈಯಕ್ತಿಕ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ.
ಒಂದು ವರ್ಷದ ಎಂಸಿಎಲ್‌ಆರ್ ಬಡ್ಡಿದರವನ್ನು ಶೇ 8.85ರಿಂದ ಶೇ 8.95ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಎರಡು ಮತ್ತು ಮೂರು ವರ್ಷದ ಎಂಸಿಎಲ್‌ಆರ್ ಕ್ರಮವಾಗಿ ಶೇ 9.05 ಮತ್ತು ಶೇ 9.10ರಷ್ಟು ಹೆಚ್ಚಳವಾಗಿದೆ. ಒಂದು, ಮೂರು ಮತ್ತು ಆರು ತಿಂಗಳ ಎಂಸಿಎಲ್‌ಆರ್ ಶೇ 8.45ರಿಂದ ಶೇ 8.85ಕ್ಕೆ ಏರಿಕೆಯಾಗಿದೆ. ಈ ಹೊಸ ಬಡ್ಡಿದರವು ಆಗಸ್ಟ್ 15ರಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ.