ಗುರುವಾರ , ನವೆಂಬರ್ 14, 2019
26 °C
ಹೊಸ ನೋಟುಗಳಿಗೆ ತಕ್ಕಂತೆ ಸಜ್ಜುಗೊಳ್ಳದ ಮಷಿನ್‌ಗಳು

ಎಸ್‌ಬಿಐ: ಮೇಲ್ದರ್ಜೆಗೇರದ 18,135 ಎಟಿಎಂ

Published:
Updated:

ಇಂದೋರ್‌ (ಮಧ್ಯಪ್ರದೇಶ): ನೋಟು ರದ್ದತಿಯಾಗಿ 21 ತಿಂಗಳುಗಳೇ ಕಳೆದಿದ್ದರೂ ಎಸ್‌ಬಿಐನ ಎಲ್ಲಾ ಎಟಿಎಂಗಳು ಹೊಸ ನೋಟುಗಳನ್ನು ಪೂರೈಸುವ ಸಾಮರ್ಥ್ಯವನ್ನು ಇದುವರೆಗೂ ಹೊಂದಿಲ್ಲ.

ದೇಶದ ಅತಿ ದೊಡ್ಡ ಸಾಲದಾತ ಸಂಸ್ಥೆಯಾಗಿರುವ ಎಸ್‌ಬಿಐ, 18,135 ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸಿಲ್ಲ.

ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಕೇಳಿರುವ ಪ್ರಶ್ನೆಯಿಂದ ಈ ಮಾಹಿತಿ ಬಹರಂಗವಾಗಿದೆ. ಹೊಸ ನೋಟುಗಳ ಅಳತೆಗೆ ತಕ್ಕಂತೆ ಎಟಿಎಂಗಳಲ್ಲಿ ನೋಟುಗಳನ್ನು ಇಡುವ ಟ್ರೇಗಳಲ್ಲಿ ಬದಲಾವಣೆ ಮಾಡಬೇಕು. 

ನೋಟು ರದ್ದತಿಗೂ ಮುನ್ನ ಚಲಾವಣೆಯಲ್ಲಿದ್ದ ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳ ಅಳತೆಗೆ ತಕ್ಕಂತೆ ಎಟಿಎಂಗಳನ್ನು ಸಜ್ಜುಗೊಳಿಸಲಾಗಿತ್ತು. ನೋಟು ರದ್ದತಿ ಬಳಿಕ ₹ 2,000, ₹ 500, ಮತ್ತು ₹ 200ರ ಮುಖಬೆಲೆಯ ನೋಟುಗಳಿಗೆ ಟ್ರೇಗಳನ್ನು ಮರುಹೊಂದಾಣಿಕೆ ಮಾಡಬೇಕಾಯಿತು. 

 

ಪ್ರತಿಕ್ರಿಯಿಸಿ (+)