ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್ ಮುಚ್ಛಲ್ ಅವರು ಇನ್ಸ್ಟಾಗ್ರಾಂನಲ್ಲಿ ಪರಸ್ಪರ 'ಅನ್ಫಾಲೋ' ಮಾಡಿಕೊಂಡಿದ್ದಾರೆ.

ಸ್ಮೃತಿ ಹಾಗೂ ಪಾಲಾಶ್ ಅವರ ನಿಶ್ಚಿತಾರ್ಥ ನವೆಂಬರ್ 21ರಂದು ನಡೆದಿತ್ತು. ನವೆಂಬರ್ 23ರಂದು ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು. ಅದಕ್ಕೂ ಮುನ್ನ ವಿವಾಹಪೂರ್ವ ಕಾರ್ಯಕ್ರಮಗಳೆಲ್ಲವೂ ಅದ್ಧೂರಿಯಾಗಿಯೇ ನಡೆದಿದ್ದವು. ಆದರೆ, ಆ ನಂತರ ಅನಿರೀಕ್ಷಿತ ಬೆಳವಣಿಗೆಗಳಾದವು.

ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಕಾರಣಕ್ಕೆ, ವಿವಾಹ ದಿನಾಂಕವನ್ನು ಮುಂದೂಡಲಾಗಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು.
.ಮದುವೆ ಕುರಿತ ವದಂತಿಗಳ ಬಗ್ಗೆ ಮೌನ ಮುರಿದ ಸ್ಮೃತಿ ಮಂದಾನ.. ಎಲ್ಲರಿಗೂ ಸಂದೇಶ.ಮುರಿದು ಬಿದ್ದ ಮದುವೆ: ಸ್ಮೃತಿ ಮಂದಾನಗೆ ಟ್ವಿಟರ್ನಲ್ಲಿ ಬೆಂಬಲದ ಮಹಾಪೂರ.
ಬಳಿಕ, ಈ ಇಬ್ಬರ ಸಂಬಂಧದ ಕುರಿತು ಹಲವು ವದಂತಿಗಳು ಹರಡಿದ್ದವು. ಪಲಾಶ್ ಅವರಿಗೆ ಮತ್ತೊಬ್ಬರೊಂದಿಗೆ ಸಂಬಂಧವಿದೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ, ಆ ಯಾವುದಕ್ಕೂ ಸ್ಮೃತಿ ಅಥವಾ ಪಲಾಶ್ ಕಡೆಯಿಂದ; ಇಲ್ಲವೇ, ಇಬ್ಬರ ಮನೆಯವರಿಂದ ಪ್ರತಿಕ್ರಿಯೆ ಬಂದಿರಲಿಲ್ಲ.

ಸ್ಮೃತಿ ಅವರು ಎಲ್ಲ ವದಂತಿಗಳಿಗೆ ಇಂದು ತೆರೆ ಎಳೆದಿದ್ದಾರೆ. 'ನಮ್ಮ ಮದುವೆ ರದ್ದಾಗಿದೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿರುವ ಅವರು, ಇದೆಲ್ಲವನ್ನೂ ಇಲ್ಲಿಗೇ ಬಿಟ್ಟು, ಮುಂದುವರಿಯುವ ಆಲೋಚನೆ ಮಾಡಿರುವುದಾಗಿ ಮತ್ತು ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ, ಮಂದಾನ ಮತ್ತು ಪಲಾಶ್ ಅವರು ಇನ್ಸ್ಟಾಗ್ರಾಂನಲ್ಲಿ ಪರಸ್ಪರ 'ಅನ್ಫಾಲೋ' ಮಾಡಿಕೊಂಡಿದ್ದಾರೆ. ಆದರೆ, ಇವರಿಬ್ಬರೂ ಈ ಹಿಂದೆ ಹಂಚಿಕೊಂಡಿದ್ದ ಕೆಲವು ಚಿತ್ರಗಳು ಅವರವರ ಖಾತೆಗಳಲ್ಲಿ ಹಾಗೇ ಉಳಿದಿವೆ.
.ಸ್ಮೃತಿ ಮಂದಾನ ಹೊಸ ಇನ್ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?.ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.