ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನಿವ್ವಳ ಲಾಭದಲ್ಲಿ ಶೇ 4.25ರಷ್ಟು ಏರಿಕೆಯಾಗಿದೆ.

ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹16,884 ಕೋಟಿ ಲಾಭಗಳಿಸಲಾಗಿತ್ತು. ಈ ತ್ರೈಮಾಸಿಕದಲ್ಲಿ ₹19,325 ಕೋಟಿ ಗಳಿಸಲಾಗಿದೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹1.08 ಲಕ್ಷ ಕೋಟಿ ವರಮಾನಗಳಿಸಿತ್ತು. ಈ ಬಾರಿ ₹1.22 ಲಕ್ಷ ಕೋಟಿ ಗಳಿಸಿದೆ. ಬಡ್ಡಿ ವರಮಾನ ₹1.11 ಲಕ್ಷ ಕೋಟಿ ಆಗಿದೆ.

ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 2.76ರಿಂದ ಶೇ 2.21ಕ್ಕೆ ತಗ್ಗಿದೆ. ನಿವ್ವಳ ಎನ್‌ಪಿಎ ಶೇ 0.71ರಿಂದ ಶೇ 0.57ಕ್ಕೆ ಇಳಿಕೆಯಾಗಿದೆ.

2024-25ನೇ ಆರ್ಥಿಕ ವರ್ಷದಲ್ಲಿ ಅಡಿಷನಲ್ ಟೈರ್ 1 ಬಾಂಡ್‌ಗಳು ಮತ್ತು ಟೈರ್ 2 ಬಾಂಡ್‌ಗಳ ವಿತರಣೆ ಮೂಲಕ ದೇಶೀಯವಾಗಿ ಅಥವಾ ಸಾಗರೋತ್ತರ ಹೂಡಿಕೆದಾರರ ಮೂಲಕ ₹25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಟೈರ್ 1 ಬಾಂಡ್‌ಗಳು ಮುಕ್ತಾಯ ಅವಧಿ (ಮೆಚ್ಯುರಿಟಿ ಪಿರಿಯಡ್) ಹೊಂದಿಲ್ಲದ ಶಾಶ್ವತ ಬಾಂಡ್‌ಗಳಾಗಿದ್ದು, ಬ್ಯಾಂಕ್ ಇವುಗಳಿಗೆ ಬಡ್ಡಿ ನೀಡುತ್ತದೆ. ಟೈರ್ 2 ಬಾಂಡ್‌ಗಳನ್ನು ಹೆಚ್ಚುವರಿಯಾಗಿ ಬಂಡವಾಳ ಸಂಗ್ರಹಿಸಲು ವಿತರಿಸಲಾಗುತ್ತದೆ.

ಆದರೆ, ಈ ಬಂಡವಾಳ ಸಂಗ್ರಹಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಬೇಕಿದೆ ಎಂದು ಬ್ಯಾಂಕ್ ತಿಳಿಸಿದೆ.

₹1 ಲಕ್ಷ ಕೋಟಿ ಲಾಭ ನಿರೀಕ್ಷೆ:

‘ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭಗಳಿಸಲು ಸಾಧ್ಯವಾಗಿಲ್ಲ’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ ತಿಳಿಸಿದ್ದಾರೆ.

‘ಮುಂಬರುವ ತ್ರೈಮಾಸಿಕಗಳಲ್ಲಿ ಬ್ಯಾಂಕ್ ಲಾಭದಲ್ಲಿ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹1 ಲಕ್ಷ ಕೋಟಿ ದಾಟುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಖಾರಾ ಅವರು, ಆಗಸ್ಟ್ 28ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ನೂತನ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸುಲು ಸೆಟ್ಟಿ ಅಧಿಕಾರ ಸ್ವೀಕರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.