ಮಂಗಳವಾರ, ಮೇ 18, 2021
22 °C
ಷೇರು ನಿಯಂತ್ರಣ ಮಂಡಳಿಯ ಸುಧಾರಣಾ ಕ್ರಮ

ಮ್ಯೂಚುವಲ್‌ ಫಂಡ್‌ ನಿಯಮ ಕಠಿಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಣಕಾಸು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ), ಮ್ಯೂಚುವಲ್‌ ಫಂಡ್ಸ್‌ಗಳ ವಹಿವಾಟಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ.

ಕಂಪನಿಗಳ ಪ್ರವರ್ತಕರು ಷೇರುಗಳನ್ನು ಅಡಮಾನ ಇಟ್ಟು ಸಾಲ ಪಡೆಯುವ, ಲಿಕ್ವಿಡ್‌ ಫಂಡ್ಸ್‌ಗಳಲ್ಲಿನ ಹೂಡಿಕೆ ಮತ್ತು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ನಿಯಮಗಳನ್ನು ಕಠಿಣಗೊಳಿಸಿದೆ. ಗುರುವಾರ ಇಲ್ಲಿ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಪ್ರವರ್ತಕರು ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆಯುವುದು, ಮ್ಯೂಚುವಲ್‌ ಫಂಡ್‌ಗಳು ಇಂತಹ ಪ್ರವರ್ತಕರಿಗೆ ಸಾಲ ನೀಡುವುದನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.

ಕಂಪನಿಗಳ ಮಾಲೀಕರು ಷೇರುಪೇಟೆಗಳಲ್ಲಿ ವಹಿವಾಟು ನಡೆಸದ ಕಂಪನಿಗಳಲ್ಲಿ ತಮ್ಮ ಷೇರುಗಳನ್ನು ಅಡ ಇಟ್ಟು ಸಾಲ ಪಡೆದು ತಮ್ಮ ಇತರ ವಹಿವಾಟಿಗೆ ಬಳಸಿಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲು ‘ಸೆಬಿ’ ಮುಂದಾಗಿದೆ.

ಎಸ್ಸೆಲ್‌ ಗ್ರೂಪ್‌ ಕಂಪನಿಗಳ ಸಾಲ ಪತ್ರಗಳಿಗೆ ಪ್ರತಿಯಾಗಿ ಮ್ಯೂಚುವಲ್‌ ಫಂಡ್ಸ್‌ಗಳು ಒಟ್ಟಾರೆ ₹ 7,000 ಕೋಟಿ ಸಾಲ ವಿತರಿಸಿದ್ದವು. ಪ್ರವರ್ತಕರ ಖಾತರಿ ಮೇರೆಗೆ ನಿಧಿ ನಿರ್ವಾಹಕರು, ಷೇರುಗಳನ್ನು ಮಾರಾಟ ಮಾಡಿರಲಿಲ್ಲ. ನಿರ್ದಿಷ್ಟ ಅವಧಿವರೆಗೆ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಡಿಎಚ್‌ಎಫ್‌ಎಲ್‌, ಝೀ ಗ್ರೂಪ್‌ ಸೇರಿದಂತೆ ಅನೇಕ ಸಂಸ್ಥೆಗಳು ಸಾಲ ಮರುಪಾವತಿಸಿರಲಿಲ್ಲ. ಇದರಿಂದಾಗಿ ಸ್ಥಿರ ಮ್ಯೂಚುವಲ್‌ ಯೋಜನೆಗಳ (ಎಫ್‌ಎಂಪಿ) ಮರು ಪಾವತಿಯಲ್ಲಿ ಸಮಸ್ಯೆ ಎದುರಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ನಗದು ಬಿಕ್ಕಟ್ಟು ಎದುರಾಗಿತ್ತು.

ಕಠಿಣ ನಿಯಮಗಳು

* ಕಂಪನಿಗಳು ಮತ್ತು ಮ್ಯೂಚುವಲ್‌ ಫಂಡ್ಸ್‌ ಸಂಸ್ಥೆಗಳ ನಡುವಣ ಸಾಲ ವಸೂಲಾತಿ ಪ್ರಕ್ರಿಯೆ ವಿಳಂಬಗೊಳಿಸುವ ಒಪ್ಪಂದದ ವಿರುದ್ಧ ಕ್ರಮ. ಇಂತಹ ಒಪ್ಪಂದಗಳಿಗೆ ಮಾನ್ಯತೆ ನೀಡದಿರುವುದು

* ಪ್ರವರ್ತಕರು ಶೇ 20ರಷ್ಟು ಷೇರುಗಳನ್ನು ಒತ್ತೆ ಇಟ್ಟರೆ ಅದಕ್ಕೆ ಸಕಾರಣ ನೀಡಬೇಕು

* ಟ್ರೆಷರಿ ಬಿಲ್‌, ಸರ್ಕಾರಿ ಸಾಲಪತ್ರ ಮತ್ತು ಕಾಲ್‌ ಮನಿ ಗಳಲ್ಲಿ ಹಣ ತೊಡಗಿಸುವ ಲಿಕ್ವಿಡ್‌ ಫಂಡ್ಸ್‌ಗಳು ಕನಿಷ್ಠ ಶೇ 20ರಷ್ಟನ್ನು ನಗದು ಮತ್ತು ಬಾಂಡ್‌ಗಳ ರೂಪದಲ್ಲಿ ಇರಿಸಬೇಕು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು