ಭಾನುವಾರ, ಏಪ್ರಿಲ್ 2, 2023
31 °C

53 ಸಾವಿರದ ಗಡಿ ದಾಟಿ ವಹಿವಾಟು ಮುಗಿಸಿದ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 193 ಅಂಶ ಏರಿಕೆ ಕಂಡಿತು. ದಿನದ ಕೊನೆಯಲ್ಲಿ 53 ಸಾವಿರ ಅಂಶಗಳ ಗಡಿ ದಾಟಿ ವಹಿವಾಟು ಮುಗಿಸಿತು. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 53 ಸಾವಿರದ ಗಡಿ ದಾಟಿರುವುದು ಇದೇ ಮೊದಲು.

ಲೋಹ, ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು. ಆದರೆ ರೂಪಾಯಿ ಮೌಲ್ಯ ಇಳಿಕೆಯಾಗಿದ್ದು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿನ ಉತ್ಸಾಹ ಇರದಿದ್ದುದು ದೇಶಿ ಸೂಚ್ಯಂಕಗಳ ಜಿಗಿತದ ಪ್ರಮಾಣವನ್ನು ತುಸು ತಗ್ಗಿಸಿದವು ಎಂದು ವರ್ತಕರು ಹೇಳಿದ್ದಾರೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕವು 61 ಅಂಶ ಏರಿಕೆ ಕಂಡಿತು. ಟಾಟಾ ಸ್ಟೀಲ್ ಷೇರು ಮೌಲ್ಯವು ಶೇ 4.38ರಷ್ಟು ಏರಿಕೆಯಾಯಿತು. ಬಜಾಜ್ ಫಿನ್‌ಸರ್ವ್‌, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್, ಸನ್‌ ಫಾರ್ಮಾ ಮತ್ತು ಪವರ್‌ಗ್ರಿಡ್ ಷೇರುಗಳ ಮೌಲ್ಯ ಏರಿಕೆಯಾಯಿತು.

ಟೈಟಾನ್, ಮಾರುತಿ, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಟೆಕ್ ಮಹೀಂದ್ರ, ಬಜಾಜ್ ಆಟೊ ಷೇರುಗಳು ಕುಸಿತ ಕಂಡವು. ‘ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯು ಕೆಲವು ಹೂಡಿಕೆದಾರರು ಉತ್ಸಾಹದಿಂದ ಖರೀದಿ ನಡೆಸುವಂತೆ ಮಾಡಿತು. ಸಣ್ಣ ಪ್ರಮಾಣದ, ಖಾಸಗಿ ವಲಯದ ಬ್ಯಾಂಕ್‌ಗಳ ಷೇರುಗಳ ಖರೀದಿ ಬಿರುಸಾಗಿ ನಡೆಯಿತು’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್. ರಂಗನಾಥನ್ ಹೇಳಿದ್ದಾರೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 7 ಪೈಸೆ ಇಳಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು