ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73 ಸಾವಿರ ದಾಟಿದ ಸೆನ್ಸೆಕ್ಸ್‌

ಐದು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹9.68 ಲಕ್ಷ ಕೋಟಿ ವೃದ್ಧಿ
Published 15 ಜನವರಿ 2024, 15:48 IST
Last Updated 15 ಜನವರಿ 2024, 15:48 IST
ಅಕ್ಷರ ಗಾತ್ರ

ಮುಂಬೈ : ಐ.ಟಿ ಷೇರುಗಳ ನಾಗಾಲೋಟದಿಂದಾಗಿ ಸೋಮವಾರ ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್‌ ಮೊದಲ ಬಾರಿಗೆ 73 ಸಾವಿರದ ಗಡಿ ದಾಟಿದೆ. ನಿಫ್ಟಿ 22 ಸಾವಿರ ದಾಟಿದೆ.

ಐ.ಟಿ, ರಿಲಯನ್ಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು ಮಾರುಕಟ್ಟೆಯು ಹೊಸ ದಾಖಲೆ ಬರೆಯಲು ನೆರವಾದವು.

ಸೆನ್ಸೆಕ್ಸ್‌ 759 ಅಂಶ ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 73,327ರಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 833 ಅಂಶ ಏರಿಕೆಯಾಗಿ 73,402 ಅಂಶಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 202 ಅಂಶ ಏರಿಕೆಯಾಗಿ, 22,097 ಬಳಿ ಕೊನೆಗೊಂಡಿತು. ವಹಿವಾಟಿನ ವೇಳೆ 221 ಅಂಶ ಹೆಚ್ಚಳವಾಗಿ 22,115ಕ್ಕೆ ತಲುಪಿತ್ತು.

ಐದು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹9.68 ಲಕ್ಷ ಕೋಟಿಯಷ್ಟು ವೃದ್ಧಿಸಿದೆ.

ಇನ್ಫೊಸಿಸ್‌, ಟಿಸಿಎಸ್‌, ವಿಪ್ರೊ ಮತ್ತು ಎಚ್‌ಸಿಎಲ್‌ ಟೆಕ್‌ನ ಮೂರನೇ ತ್ರೈಮಾಸಿಕದ ಫಲಿತಾಂಶವು ಸೂಚ್ಯಂಕ ಏರಿಕೆಗೆ ಸಹಕಾರಿಯಾಗಿದೆ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌, ಟೆಕ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಗಳಿಕೆ ಕಂಡಿವೆ. 

ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌, ಲಾರ್ಸೆನ್‌ ಆ್ಯಂಡ್‌ ಟೊರ್ಬೊ, ಟಾಟಾ ಮೋಟರ್ಸ್‌, ಟಾಟಾ ಸ್ಟೀಲ್‌ ಮತ್ತು ಆಕ್ಸಿಸ್‌ ಬ್ಯಾಂಕ್‌ ನಷ್ಟ ದಾಖಲಿಸಿವೆ. ಬ್ರೆಂಟ್‌ ಕಚ್ಚಾ ತೈಲ ಶೇ 0.29ರಷ್ಟು ಇಳಿಕೆಯಾಗಿ ಬ್ಯಾರೆಲ್‌ 78.06 ಡಾಲರ್‌ ಆಗಿದೆ.

ಎಚ್‌ಸಿಎಲ್‌ ಟೆಕ್‌ ಷೇರು ಏರಿಕೆ: 2023ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದಲ್ಲಿನ ಹೆಚ್ಚಳದಿಂದ ಕಂಪನಿಯ ಷೇರು ಮೌಲ್ಯವು ಶೇ 3ರಷ್ಟು ಏರಿಕೆ ಆಗಿದೆ. ಇದರಿಂದ ಕಂಪನಿಯು ಒಂದೇ ದಿನ ₹12,130 ಕೋಟಿ ಗಳಿಸಿದ್ದು, ಮಾರುಕಟ್ಟೆ ಬಂಡವಾಳ ₹4.30 ಲಕ್ಷ ಕೋಟಿಗೆ ಮುಟ್ಟಿದೆ. 

ರೂಪಾಯಿಗೆ ಬಲ: ದೇಶೀಯ ಷೇರು ಮಾರುಕಟ್ಟೆಯಲ್ಲಿನ ಓಟದಿಂದಾಗಿ ಡಾಲರ್‌ ಎದುರು ರೂಪಾಯಿಯ ಮೌಲ್ಯವು 9 ಪೈಸೆ ಏರಿಕೆಯಾಗಿ, 82.86ಕ್ಕೆ ವಿನಿಮಯಗೊಂಡಿದೆ. ಮಾರುಕಟ್ಟೆ ಆರಂಭವಾದಾಗ ರೂಪಾಯಿ 82.77 ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT