ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಹೊಸ ಎತ್ತರಕ್ಕೆ ಸೆನ್ಸೆಕ್ಸ್‌, ನಿಫ್ಟಿ

Last Updated 11 ಅಕ್ಟೋಬರ್ 2021, 13:35 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿಕೆ ಕಂಡವು. ವಾಹನ, ಇಂಧನ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ಷೇರುಪೇಟೆಗಳು ಈ ಮಟ್ಟವನ್ನು ತಲುಪಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 76 ಅಂಶ ಹೆಚ್ಚಳ ಕಂಡು ಹೊಸ ಎತ್ತರವಾದ 60,135 ಅಂಶಗಳಿಗೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ 60,476 ಅಂಶಗಳಿಗೆ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 50 ಅಂಶ ಹೆಚ್ಚಾಗಿ 17,945 ಅಂಶಗಳಿಗೆ ಏರಿಕೆ ಕಂಡಿತು. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮಟ್ಟವಠಾದ 18,041 ಅಂಶಗಳಿಗೆ ತಲುಪಿತ್ತು.

ಏಷ್ಯಾದ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಹಿವಾಟು ದೇಶಿ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿತು. ರಫ್ತು ವಹಿವಾಟು ಆರೋಗ್ಯಕರ ಬೆಳವಣಿಗೆ ಕಾಣುತ್ತಿರುವ ವರದಿ ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು ಎಂದುಆನಂದ್ ರಾಠಿ ಕಂಪನಿಯ ಸಂಶೋಧನಾ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.

ರೂಪಾಯಿ 37 ಪೈಸೆ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 37 ಪೈಸೆಗಳಷ್ಟು ಕುಸಿತ ಕಂಡಿದ್ದು, ಒಂದು ಡಾಲರ್‌ಗೆ ₹ 75.36ರಂತೆ ವಿನಿಮಯಗೊಂಡಿತು. ಇದು 15 ತಿಂಗಳ ಕನಿಷ್ಠ ಮಟ್ಟವಾಗಿದೆ.

ಕಚ್ಚಾ ತೈಲ ದರ ಏರಿಕೆಯಿಂದ ಆಮದು ವೆಚ್ಚ ಹೆಚ್ಚಾಗುವ ಆತಂಕ ಹಾಗೂ ವಿದೇಶಿ ಬಂಡವಾಳ ಹೊರಹರಿವಿನಿಂದಾಗಿ ಭಾರತದ ಕರೆನ್ಸಿಯು ಇದೇ ಮೊದಲ ಬಾರಿಗೆ 75 ಕ್ಕಿಂತ ಕೆಳ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಟಿಸಿಎಸ್‌ ಷೇರು ಶೇ 6ಕ್ಕೂ ಹೆಚ್ಚು ಇಳಿಕೆ: ಟಿಸಿಎಸ್‌ ಕಂಪನಿಯ ಸೆಪ್ಟೆಂಬರ್‌ ತ್ರೈಮಾಸಿಕದ ಫಲಿತಾಂಶವು ಮಾರುಕಟ್ಟೆಯ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಕಂಪನಿಯ ಷೇರುಗಳ ಮೌಲ್ಯವು ಸೋಮವಾರ ಶೇ 6ಕ್ಕೂ ಹೆಚ್ಚಿನ ಇಳಿಕೆ ಕಂಡಿದೆ.

ಬಿಎಸ್‌ಇನಲ್ಲಿ ಷೇರು ಮೌಲ್ಯ ಶೇ 6.32ರಷ್ಟು ಇಳಿಕೆ ಆದರೆ, ಎನ್‌ಎಸ್‌ಇನಲ್ಲಿ ಶೇ 6.29ರಷ್ಟು ಇಳಿಕೆ ಆಗಿದೆ. ಬಿಎಸ್‌ಇನಲ್ಲಿ ಕಂಪನಿಯ ಬಂಡವಾಳ ಮೌಲ್ಯದಲ್ಲಿ ₹ 92,032 ಕೋಟಿ ಕರಗಿದ್ದು, ಒಟ್ಟಾರೆ ಬಂಡವಾಳ ಮೌಲ್ಯವು ₹ 13.63 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT