ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿನ ಮಾರಾಟ ಒತ್ತಡದಿಂದಾಗಿ ದೇಶಿ ಹಣಕಾಸು ಕಂಪನಿಗಳ ಷೇರುಗಳು ನಷ್ಟಕ್ಕೆ ಒಳಗಾಗಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರ 661 ಅಂಶಗಳ ಕುಸಿತ ಕಂಡಿತು.

ದಿನದ ವಹಿವಾಟಿನಲ್ಲಿ 35,877 ಅಂಶಗಳವರೆಗೆ ಕುಸಿತ ಕಂಡಿದ್ದ ಸೂಚ್ಯಂಕವು ಅಂತಿಮವಾಗಿ 661 ಅಂಶಗಳ ನಷ್ಟದೊಂದಿಗೆ 36,033 ಅಂಶಗಳಿಗೆ ಕುಸಿಯಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 195 ಅಂಶ ಕುಸಿತ ಕಂಡು 10,607 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿತು.

ಷೇರುಗಳ ಕುಸಿತದಲ್ಲಿ ಎಚ್‌ಡಿಎಫ್‌ಸಿ ಷೇರುಗಳು (ಶೇ 2.94) ಮುಂಚೂಣಿಯಲ್ಲಿದ್ದವು. ಇಂಡಸ್‌ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ, ಬಜಾಜ್ ಫಿನ್‌ಸರ್ವ್, ಪವರ್‌ಗ್ರಿಡ್ ಮತ್ತು ಎಸ್‌ಬಿಐ ಷೇರುಗಳೂ ನಷ್ಟಕ್ಕೆ ಗುರಿಯಾದವು.

ಟೈಟಾನ್, ಭಾರ್ತಿ ಏರ್‌ಟೆಲ್, ಬಜಾಜ್ ಆಟೊ ಷೇರುಗಳು ಗಳಿಕೆ ಕಂಡವು.

ಅಮೆರಿಕ ಮತ್ತು ಚೀನಾ ನಡುವಣ ಉದ್ವಿಗ್ನ ಪರಿಸ್ಥಿತಿ ತೀವ್ರಗೊಂಡಿರುವುದು ಮತ್ತು ಕೋವಿಡ್ ಪ್ರಕರಣಗಳಲ್ಲಿನ ಹೆಚ್ಚಳವು ಹೂಡಿಕೆದಾರರ ಖರೀದಿ ಉತ್ಸಾಹ ಉಡುಗಿಸಿವೆ.

ಶಾಂಘೈ, ಹಾಂಗ್‌ಕಾಂಗ್, ಟೋಕಿಯೊ, ಸೋಲ್ ಮತ್ತು ಯುರೋಪ್ ಷೇರುಪೇಟೆಗಳಲ್ಲಿನ ವಹಿವಾಟು ತೀವ್ರ ನಷ್ಟ ಕಂಡಿದೆ.

ರೂಪಾಯಿ 23 ಪೈಸೆ ನಷ್ಟ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ 23 ಪೈಸೆ ಕುಸಿತ ಕಂಡು ₹ 75.42ಕ್ಕೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.