ಬುಧವಾರ, ಅಕ್ಟೋಬರ್ 20, 2021
24 °C

ಸೆನ್ಸೆಕ್ಸ್‌ 958 ಅಂಶ ಜಿಗಿತ: ₹ 261.73 ಲಕ್ಷ ಕೋಟಿಗೆ ತಲುಪಿದೆ ಬಂಡವಾಳ ಮೌಲ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸೂಚ್ಯಂಕಗಳು ಏರಿಕೆ ಕಂಡವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 958 ಅಂಶ ಜಿಗಿತ ಕಂಡು ಹೊಸ ಎತ್ತರವಾದ 59,885 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 276 ಅಂಶ ಹೆಚ್ಚಾಗಿ 17,823 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಸೆನ್ಸೆಕ್ಸ್‌ನಲ್ಲಿ ಬಜಾಜ್‌ ಫಿನ್‌ಸರ್ವ್‌ ಕಂಪನಿಯ ಷೇರು ಮೌಲ್ಯ ಶೇ 5.15ರಷ್ಟು ಗರಿಷ್ಠ ಏರಿಕೆ ಕಂಡಿತು.

ಬಿಎಸ್‌ಇಯಲ್ಲಿ ರಿಯಲ್‌ ಎಸ್ಟೇಟ್‌, ಬ್ಯಾಂಕಿಂಗ್‌, ಇಂಧನ, ಹಣಕಾಸು, ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯದ ಸೂಚ್ಯಂಕಗಳು ಶೇ 8.71ರವರೆಗೂ ಏರಿಕೆ ಕಂಡವು.

ರಿಯಲ್‌ ಎಸ್ಟೇಟ್‌, ಲೋಹ ಮತ್ತು ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಎಲ್ಲಾ ವಲಯಗಳಲ್ಲಿಯೂ ಖರೀದಿ ವಹಿವಾಟು ಕಂಡುಬಂತು. ಬಾಂಡ್‌ನಂತಹ ಹಣಕಾಸಿನ ಸ್ವತ್ತುಗಳ ಖರೀದಿಯನ್ನು ನವೆಂಬರ್‌ನಲ್ಲಿ ತಗ್ಗಿಸಲು ಆರಂಭಿಸುವುದಾಗಿ ಅಮೆರಿಕದ ಫೆಡರಲ್‌ ಬ್ಯಾಂಕ್‌ ಹೇಳಿದೆ. ಈ ಹೇಳಿಕೆಯ ಹೊರತಾಗಿಯೂ ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬಂಡವಾಳ ಮೌಲ್ಯ ಹೆಚ್ಚಳ: ಮುಂಬೈ ಷೇರುಪೇಟೆಯಲ್ಲಿ ಗುರುವಾರ ಕಂಡುಬಂದ ಸಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 3.16 ಲಕ್ಷ ಕೋಟಿಯಷ್ಟು ಹೆಚ್ಚಾಯಿತು. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 261.73 ಲಕ್ಷ ಕೋಟಿಗೆ ತಲುಪಿತು. ಇದು ಸಾರ್ವಕಾಲಿಕ ದಾಖಲೆ ಮಟ್ಟ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು