ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಖರೀದಿ ಭರಾಟೆ: ಸೂಚ್ಯಂಕ ಏರಿಕೆ

537 ಅಂಶಗಳಿಗೆ ಜಿಗಿದ ಸಂವೇದಿ ಸೂಚ್ಯಂಕ
Last Updated 17 ಮೇ 2019, 20:16 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬ್ಯಾಂಕಿಂಗ್‌ ಮತ್ತು ವಾಹನ ತಯಾರಿಕಾ ಕಂಪನಿಗಳ ಷೇರುಗಳಲ್ಲಿನ ಖರೀದಿ ಭರಾಟೆಯ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 537 ಅಂಶಗಳ ಏರಿಕೆ ದಾಖಲಿಸಿತು.

ಜಾಗತಿಕ ಪೇಟೆಗಳಲ್ಲಿನ ಪ್ರತಿಕೂಲ ವಿದ್ಯಮಾನಗಳ ಹೊರತಾಗಿಯೂ, ಭಾನುವಾರ ಪ್ರಕಟಗೊಳ್ಳಲಿರುವ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗೆ ಪೂರ್ವಭಾವಿಯಾಗಿ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಕಂಡುಬಂದಿತು. ಕೇಂದ್ರದಲ್ಲಿ ಸ್ಥಿರ ಸರ್ಕಾರ ಬರಲಿದ್ದು, ಸುಧಾರಣಾ ಕ್ರಮಗಳು ಮುಂದುವರೆಯಲಿವೆ ಎನ್ನುವುದು ಷೇರು ವಹಿವಾಟುದಾರರ ನಿರೀಕ್ಷೆಯಾಗಿದೆ.

ಸೂಚ್ಯಂಕವು 537 ಅಂಶಗಳಷ್ಟು ಏರಿಕೆಯಾಗಿ 37,930 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 150 ಅಂಶ ಏರಿಕೆ ಕಂಡು 11,407 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಬಜಾಜ್‌ ಫೈನಾನ್ಸ್‌ ಷೇರು ಗರಿಷ್ಠ ಲಾಭ ಬಾಚಿಕೊಂಡಿತು. ಹೀರೊ ಮೋಟೊಕಾರ್ಪ್‌, ಮಾರುತಿ, ಕೋಟಕ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಐಟಿಸಿ, ಕೋಲ್‌ ಇಂಡಿಯಾ, ಎಸ್‌ಬಿಐ, ಏಷಿಯನ್ ಪೇಂಟ್ಸ್‌ ಷೇರುಗಳ ಬೆಲೆ ಶೇ 4.26ರವರೆಗೆ ಗಳಿಕೆ ಕಂಡವು.

ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರಕ್ಕೆ ಸಂಬಂಧಿಸಿದ ಮಾತುಕತೆಯ ಅನಿಶ್ಚಿತತೆಯ ಹೊರತಾಗಿಯೂ ದೇಶಿ ಷೇರುಪೇಟೆ ಗಮನಾರ್ಹ ಚೇತರಿಕೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT