ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

Published 3 ನವೆಂಬರ್ 2023, 13:29 IST
Last Updated 3 ನವೆಂಬರ್ 2023, 13:29 IST
ಅಕ್ಷರ ಗಾತ್ರ

ನವದೆಹಲಿ: ಸೇವಾ ವಲಯದ ಚಟುವಟಿಕೆಯು ಅಕ್ಟೋಬರ್‌ನಲ್ಲಿ 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್ ಇಂಡಿಯಾ ಸಂಸ್ಥೆ ತಿಳಿಸಿದೆ.

ಸೇವೆಗಳಿಗೆ ಬೇಡಿಕೆಯು ನಿಧಾನಗತಿಯಲ್ಲಿ ಏರಿಕೆ ಕಂಡಿರುವುದು ಹಾಗೂ ಕಂಪನಿಗಳಿಗೆ ಹೊಸ ವಹಿವಾಟುಗಳು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಪಿಎಂಐ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಸೆಪ್ಟೆಂಬರ್‌ನಲ್ಲಿ 61 ಇದ್ದಿದ್ದು ಅಕ್ಟೋಬರ್‌ ತಿಂಗಳಿನಲ್ಲಿ 58.4ಕ್ಕೆ ಇಳಿಕೆ ಆಗಿದೆ. ಮಾರ್ಚ್‌ ನಂತರದ ಕನಿಷ್ಠ ಮಟ್ಟದ ಬೆಳವಣಿಗೆ ಇದಾಗಿದೆ. 

ಸೇವಾ ವಲಯದ 400 ಕಂಪನಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ವರದಿಯನ್ನು ಸಂಸ್ಥೆಯು ನೀಡಿದೆ.  ಸೂಚ್ಯಂಕವು 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಮಟ್ಟ ಎಂದೂ 50ಕ್ಕಿಂತ ಹೆಚ್ಚು ಇದ್ದರೆ ಸಕಾರಾತ್ಮಕ ಮಟ್ಟ ಎಂದು ಪರಿಗಣಿಸಲಾಗುತ್ತದೆ.

ಹಲವು ಕಂಪನಿಗಳು ಹೊಸ ವಹಿವಾಟುಗಳನ್ನು ಪಡೆದುಕೊಂಡಿವೆ. ಆದರೆ, ಕೆಲವು ಕಂಪನಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಬಂದಿಲ್ಲ. ಪೈಪೋಟಿ ಇರುವುದು ಸಹ ಒಟ್ಟು ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.

ಸೇವೆಗಳ ರಫ್ತು ಅಕ್ಟೋಬರ್‌ನಲ್ಲಿ ಎರಡನೇ ವೇಗದ ಬೆಳವಣಿಗೆ ಕಂಡಿದೆ. 2014ರ ಸೆಪ್ಟೆಂಬರ್‌ನಿಂದ ಸೇವಾ ವಲಯದ ಬೆಳವಣಿಗೆ ದಾಖಲಿಸುವುದು ಆರಂಭ ಆಯಿತು. ಏಷ್ಯಾ, ಯುರೋಪ್‌ ಮತ್ತು ಅಮೆರಿಕದಿಂದ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.

ವೆಚ್ಚ ಹೆಚ್ಚಳ: ಆಹಾರ, ಇಂಧನ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಏರಿಕೆ ಕಂಡಿರುವುದರಿಂದ ಅಕ್ಟೋಬರ್‌ನಲ್ಲಿ ಭಾರತದ ಕಂಪನಿಗಳ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ. ಕಂಪನಿಗಳು ಇದನ್ನು ತಮ್ಮ ಗ್ರಾಹಕರಿಗೆ ವರ್ಗಾವಣೆ ಮಾಡಿರುವುದು ಸಹ ಬೇಡಿಕೆ ಮೇಲೆ ಪರಿಣಾಮ ಬೀರುವಂತಾಗಿದೆ. ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯು ವಹಿವಾಟು ನಡೆಸುವ ವಿಶ್ವಾಸವನ್ನು ಕುಗ್ಗಿಸಿದೆ ಎಂದು ಲಿಮಾ ಹೇಳಿದ್ದಾರೆ.

ತಯಾರಿಕೆ ಮತ್ತು ಸೇವಾ ವಲಯಗಳ ಒಟ್ಟಾರೆ ಬೆಳವಣಿಗೆಯನ್ನು ತಿಳಿಸುವ ‘ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌’ ಸೆಪ್ಟೆಂಬರ್‌ನಲ್ಲಿ 61 ಇದ್ದಿದ್ದು ಅಕ್ಟೋಬರ್‌ನಲ್ಲಿ 58.4ಕ್ಕೆ ಇಳಿಕೆ ಕಂಡಿದೆ. ತಯಾರಿಕೆ ಮತ್ತು ಸೇವಾ ಚಟುವಟಿಕೆಗಳು ಅಕ್ಟೋಬರ್‌ನಲ್ಲಿ ಬೆಳವಣಿಗೆಯ ವೇಗವನ್ನು ಕಳೆದುಕೊಂಡಿವೆ. ಸರಕು ಮತ್ತು ಸೇವೆಗಳ ಮೇಲಿನ ದರವು ಏರಿಕೆ ಕಂಡಿರುವುದರಿಂದ ಹೀಗಾಗಿದೆ ಎಂದು ಸಂಸ್ಥೆಯು ಹೇಳಿದೆ.

ಹಣದುಬ್ಬರ; ಕುಗ್ಗಿದ ವಹಿವಾಟು ನಡೆಸುವ ವಿಶ್ವಾಸ ಏಷ್ಯಾ, ಯುರೋಪ್‌, ಅಮೆರಿಕದಿಂದ ಹೆಚ್ಚು ಬೇಡಿಕೆ 27ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಬೆಳವಣಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT