ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಲಾವಣೆಯಲ್ಲಿರುವ ₹500 ನೋಟುಗಳ ಸಂಖ್ಯೆ ಎಷ್ಟಿದೆ?: ಇಲ್ಲಿದೆ ಆರ್‌ಬಿಐ ಮಾಹಿತಿ

Published 30 ಮೇ 2024, 13:56 IST
Last Updated 30 ಮೇ 2024, 13:56 IST
ಅಕ್ಷರ ಗಾತ್ರ

ನವದೆಹಲಿ: 2024ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಸಂಪೂರ್ಣ ಕರೆನ್ಸಿ ಪೈಕಿ ₹500 ಮುಖಬೆಲೆಯ ನೋಟುಗಳ ಪ್ರಮಾಣ ಶೇಕಡ 86.5ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ₹500 ಮುಖಬೆಲೆಯ ನೋಟುಗಳ ಪ್ರಮಾಣ ಶೇಕಡ 77.1ರಷ್ಟಿತ್ತು ಎಂದು ಆರ್‌ಬಿಐ ಹೇಳಿದೆ.

2023ರ ಮೇ ತಿಂಗಳಿನಲ್ಲಿ ₹2,000 ನೋಟುಗಳನ್ನು ಹಿಂಪಡೆಯವ ಆದೇಶ ಮಾಡಿದ ಬಳಿಕ ಈ ಮುಖಬೆಲೆಯ ನೋಟುಗಳ ಪ್ರಮಾಣ ಶೇಕ 10.8ರಿಂದ 0.2ಕ್ಕೆ ಇಳಿದಿದೆ ಎಂದು ಅದು ಹೇಳಿದೆ.

ಚಲಾವಣೆಯಲ್ಲಿರುವ ₹500 ಮುಖಬೆಲೆಯ ನೋಟುಗಳ ಸಂಖ್ಯೆ ಅತ್ಯಧಿಕ 5.16 ಲಕ್ಷದಷ್ಟಿದ್ದು, ₹10 ಮುಖಬೆಲೆಯ ನೋಟುಗಳ ಸಂಖ್ಯೆ 2.49 ಲಕ್ಷದಷ್ಟಿದ್ದು, 2ನೇ ಸ್ಥಾನದಲ್ಲಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡೂ ನೋಟುಗಳ ಚಲಾವಣೆಯ ಮೌಲ್ಯ ಮತ್ತು ಪ್ರಮಾಣವು ಕ್ರಮವಾಗಿ ಶೇಕಡ 3.9 ಮತ್ತು 7.8ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT