ಭಾನುವಾರ, ಜುಲೈ 25, 2021
22 °C

ಮನೆ ಬಾಗಿಲಲ್ಲಿ ಕಾರ್ ಸರ್ವೀಸ್‌: ಶೆಲ್ ಲೂಬ್ರಿಕೆಂಟ್ಸ್‌–ಪಿಟ್ ಸ್ಟಾಪ್ ಸಹಭಾಗಿತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ವಾಹನಗಳ ಸರ್ವೀಸ್‌ ಸೌಲಭ್ಯ ಒದಗಿಸುವ ಸಲುವಾಗಿ ಶೆಲ್‌ ಲೂಬ್ರಿಕೆಂಟ್ಸ್‌ ಮತ್ತು ಬೆಂಗಳೂರಿನ ನವೋದ್ಯಮ ಪಿಟ್‌ಸ್ಟಾಪ್‌ ಒಪ್ಪಂದ ಮಾಡಿಕೊಂಡಿವೆ.

ಅತ್ಯಂತ ಕಡಿಮೆ ಸಂಪರ್ಕದೊಂದಿಗೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸುರಕ್ಷಿತ ಮತ್ತು ವಿಶ್ವಾಸಾರ್ಹವಾದ ಸೇವೆಗಳನ್ನು ಒದಗಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

 ಸಂಚಾರಿ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ವಾಹನಗಳನ್ನು ಸರ್ವೀಸ್ ಮಾಡಲಾಗುತ್ತದೆ. ಪಿಪಿಇ ಬಳಕೆ ಮತ್ತು ಪ್ರತಿಯೊಂದು ಉಪಕರಣವನ್ನೂ ಸ್ಯಾನಿಟೈಸ್ ಮಾಡುವುದು ಸೇರಿದಂತೆ ಎಲ್ಲಾ ಸುರಕ್ಷತಾ ಶಿಷ್ಚಾಚಾರಗಳನ್ನು ಅನುಸರಿಸುವುದರ ಬಗ್ಗೆ ಮೆಕ್ಯಾನಿಕ್‌ಗಳಿಗೆ  ತರಬೇತಿ  ನೀಡಲಾಗಿದೆ. ಮಾಹಿತಿಗಾಗಿ  https://www.getpitstop.com ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು