ಭಾನುವಾರ, ಜನವರಿ 17, 2021
20 °C

ಎಸ್‌ಐಪಿ ಹೂಡಿಕೆ 31 ತಿಂಗಳ ಕನಿಷ್ಠ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನವೆಂಬರ್‌ನಲ್ಲಿ ₹ 7,302 ಕೋಟಿ ಹೂಡಿಕೆ ಆಗಿದ್ದು, ಇದು 31 ತಿಂಗಳ ಕನಿಷ್ಠ ಮಟ್ಟವಾಗಿದೆ.

2018ರ ಏಪ್ರಿಲ್‌ನಲ್ಲಿ ₹ 6,690 ಕೋಟಿ ಹೂಡಿಕೆ ಆಗಿತ್ತು. ಆ ಬಳಿಕ ಆಗಿರುವ ಕನಿಷ್ಠ ಮಟ್ಟದ ಹೂಡಿಕೆ ಇದಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಆರು ತಿಂಗಳ ನಿರಂತರ ಇಳಿಕೆಯ ಬಳಿಕ ಅಕ್ಟೋಬರ್‌ನಲ್ಲಿ ಎಸ್‌ಐಪಿ ಮೂಲಕ ಆಗುವ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ನವೆಂಬರ್‌ನಲ್ಲಿ ಮತ್ತೆ ಇಳಿಕೆಯ ಹಾದಿ ಹಿಡಿದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಹೂಡಿಕೆದಾರರು ತಮ್ಮ ಬಳಿ ತುಸು ನಗದನ್ನು ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಎಸ್‌ಐಪಿ ಮೂಲಕ ಆಗುವ ಹೂಡಿಕೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ನವೆಂಬರ್‌ನಲ್ಲಿ 3.39 ಲಕ್ಷ ಹೊಸ ಎಸ್‌ಐಪಿ ಖಾತೆಗಳು ಸೇರ್ಪಡೆ ಆಗಿವೆ. ಇದರಿಂದ ಒಟ್ಟಾರೆ ಎಸ್‌ಐಪಿ ಖಾತೆಗಳ ಸಂಖ್ಯೆ 3.41 ಕೋಟಿಗೆ ತಲುಪಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು