ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿರುವ ದೇಶಗಳ ನೆರವಿಗೆ ಸಂಘಟಿತ ಯತ್ನ ಅಗತ್ಯ: ನಿರ್ಮಲಾ ಸೀತಾರಾಮನ್‌

Last Updated 25 ಫೆಬ್ರವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹಣಕಾಸಿನ ಅಗತ್ಯಗಳನ್ನು ಈಡೇರಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌), ವಿಶ್ವ ಬ್ಯಾಂಕ್‌ ತರಹದ ಹಲವು ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುವ ಅಗತ್ಯ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಎರಡು ದಿನ ಗಳವರೆಗೆ ನಡೆದ ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ಸಭೆಯ ಬಳಿಕ ಅವರು ಸುದ್ದಿ
ಗಾರರೊಂದಿಗೆ ಮಾತನಾಡಿದರು.

ಬಡರಾಷ್ಟ್ರಗಳ ಸಾಲದ ಸಮಸ್ಯೆ ಬಗೆಹರಿಸುವುದು ಸೇರಿದಂತೆ, ಡಿಜಿಟಲ್‌ ಕರೆನ್ಸಿ, ಹವಾಮಾನ ಬದಲಾವಣೆ ಮತ್ತು ವಿತ್ತೀಯ ಒಳಗೊಳ್ಳುವಿಕೆ ವಿಷಯಗಳ ಮೇಲೆ ಎವಿಸ್ತೃತವಾದ ಚರ್ಚೆ ನಡೆಯಿತು ಎಂದರು.

ಜಾಂಬಿಯಾ, ಈಥೋಪಿಯಾ, ಘಾನಾ ಮತ್ತು ಶ್ರೀಲಂಕಾದಲ್ಲಿ ಸಾಲ ಮರುಹೊಂದಾಣಿಕೆ ಮಾಡುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ ಅವರು, ಕಡಿಮೆ ಮತ್ತು ಮಧ್ಯಮ ಆದಾಯ ಇರುವ ದೇಶಗಳು ಎದುರಿಸುತ್ತಿರುವ ಸಾಲದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT