ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ: ಬಡ್ಡಿ ಯಥಾಸ್ಥಿತಿ

Last Updated 29 ಮಾರ್ಚ್ 2019, 17:09 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್‌ ತಿಂಗಳಿನಿಂದ ಆರಂಭವಾಗಲಿರುವ 2019–20ನೆ ಸಾಲಿನ ಹೊಸ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

2018–19ನೆ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದಲ್ಲಿದ್ದ ಬಡ್ಡಿ ದರಗಳೇ ಏಪ್ರಿಲ್‌ – ಜೂನ್‌ ಅವಧಿಯಲ್ಲಿ ಮುಂದುವರೆಯಲಿವೆ ಎಂದು ಹಣಕಾಸು ಸಚಿವಾಲಯವು ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಐದು ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಸಂಬಂಧಿಸಿದಂತೆ ಶೇ 8.7ರಷ್ಟು ಬಡ್ಡಿ ದರ ಕಾಯ್ದುಕೊಳ್ಳಲಾಗಿದೆ. ಈ ಯೋಜನೆಯ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲಾಗುವುದು. ಉಳಿತಾಯ ಠೇವಣಿಗೆ ಶೇ 4ರಷ್ಟು ಬಡ್ಡಿ ನೀಡಲಾಗುತ್ತಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸುವ ವ್ಯವಸ್ಥೆ ಜಾರಿಯಲ್ಲಿ ಇದೆ. ಸರ್ಕಾರಿ ಬಾಂಡ್‌ಗಳ ಗಳಿಕೆ ಆಧರಿಸಿ ಈ ಬಡ್ಡಿ ದರಗಳನ್ನು ನಿರ್ಧರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT