ಸೋಮವಾರ, ಸೆಪ್ಟೆಂಬರ್ 23, 2019
28 °C
ಹೆಚ್ಚುವರಿ ಸರ್ಚಾರ್ಜ್‌, ವಾಹನ ಉದ್ಯಮದ ನಕಾರಾತ್ಮಕ ಪ್ರಗತಿ

ಸಣ್ಣ ಷೇರುಗಳಿಗೆ ಹೆಚ್ಚಿನ ಹಾನಿ

Published:
Updated:

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ವಹಿವಾಟಿನಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಷೇರುಗಳು ಶೇ 15.42ರವರೆಗೆ ಗರಿಷ್ಠ ಕುಸಿತ ಅನುಭವಿಸಿವೆ. 

ಮುಂಬೈ ಷೇರುಪೇಟೆಯಲ್ಲಿ ಸಣ್ಣ ಪ್ರಮಾಣದ ಷೇರುಗಳಿಗೆ ಹೋಲಿಸಿದರೆ ಪ್ರಮುಖ ಕಂಪನಿಗಳ ದೊಡ್ಡ ಪ್ರಮಾಣದ ಷೇರುಗಳಿಗೆ ಹೆಚ್ಚಿನ ಹಾನಿ ಆಗಿಲ್ಲ. 30 ಷೇರುಗಳ ಸೂಚ್ಯಂಕ 1,527.46 ಅಂಶಗಳಷ್ಟು (ಶೇ 3.94) ಕುಸಿತ ಕಂಡಿದೆ.

ಮಧ್ಯಮ ಪ್ರಮಾಣದ ಷೇರುಗಳ ಸೂಚ್ಯಂಕವು ಆಗಸ್ಟ್‌ 23ರಂದು 12,914.63 ಅಂಶಗಳಿಗೆ ಅಂದರೆ 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಸಣ್ಣ ಪ್ರಮಾಣದ ಷೇರುಗಳ ಸೂಚ್ಯಂಕ ಒಂದು ವರ್ಷದ ಕನಿಷ್ಠ ಮಟ್ಟವಾದ 11,950.86 ಅಂಶಗಳಿಗೆ ಇಳಿಕೆಯಾಗಿತ್ತು.

ವಿದೇಶಿ ಹೂಡಿಕೆದಾರರಿಗೆ ಗರಿಷ್ಠ ತೆರಿಗೆ ಘೋಷಣೆ, ವಾಹನ ಉದ್ಯಮದ ನಕಾರಾತ್ಮಕ ಪ್ರಗತಿಯು ಹೂಡಿಕೆ ಮೇಲೆ ಪರಿಣಾಮ ಬೀರಿದೆ.

Post Comments (+)