ಮಂಗಳವಾರ, ನವೆಂಬರ್ 19, 2019
29 °C

‘ಎಸ್‌ಎಂಇ’ ವ್ಯಾಖ್ಯಾನ ಬದಲಾವಣೆ ಬೇಡ: ಆರ್. ರಾಜು

Published:
Updated:
Prajavani

ಮಂಗಳೂರು: ‘ಕೇಂದ್ರ ಸರ್ಕಾರ ವಹಿವಾಟಿನ ಆಧಾರದ ಮೇಲೆ ಸಣ್ಣ ಕೈಗಾರಿಕೆಗಳ (ಎಂಎಸ್‌
ಎಂಇ) ವ್ಯಾಖ್ಯಾನವನ್ನು ಬದಲಿಸಲು ಹೊರಟಿದ್ದು, ಇದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್. ರಾಜು ಆಗ್ರಹಿಸಿದರು.

‘ಸದ್ಯಕ್ಕೆ ₹ 5 ಕೋಟಿಯಿಂದ ₹ 50 ಕೋಟಿಯವರೆಗೆ ವಹಿವಾಟು ನಡೆಸುವ ಉದ್ಯಮಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಾಗಿ ಪರಿಗಣಿಸಲಾಗುತ್ತಿದೆ. ಇದೀಗ ಸರ್ಕಾರ ಈ ಮೊತ್ತವನ್ನು ₹ 75 ಕೋಟಿಗೆ ವಿಸ್ತರಿಸಲು ಹೊರಟಿದೆ. ಇದರಿಂದ ಉತ್ಪಾದಕರಲ್ಲದವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಿಗುವ ಪ್ರಯೋಜನಗಳನ್ನು ಪಡೆಯುವಂತಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಯಂತ್ರೋಪಕರಣ ಹಾಗೂ ಉತ್ಪಾದನೆಯ ಆಧಾರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಗುರುತಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರಧಾನಿ ಮೋದಿ ಅವರ 59 ನಿಮಿಷಗಳ ಸಾಲ ಯೋಜನೆಯಿಂದ ಉದ್ಯಮಿಗಳಿಗೆ ಪ್ರಯೋಜನ ಆಗುತ್ತಿಲ್ಲ. ಆನ್‌ಲೈನ್‌ನಲ್ಲಿ ಸ್ವೀಕೃತಿ ಪಡೆದ ನಂತರ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ತೊಂದರೆ ಎದುರಿಸುವಂತಾಗಿದೆ. ಇದನ್ನು ನಿವಾರಿಸಲು ನಿಯಮಾವಳಿಗಳನ್ನು ಸರಳಗೊಳಿಸಬೇಕು. ಈ ಯೋಜನೆಯಡಿ ವಿತರಿಸಿದ ಸಾಲಗಳ ಬಗ್ಗೆ ಬ್ಯಾಂಕ್‌ಗಳ ಸೂಚನಾ ಫಲಕದಲ್ಲಿ ನಮೂದಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)