ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ದರ ಏರಿಕೆ: ಶಾಕಾಹಾರಿ ಊಟ ದುಬಾರಿ

Published 7 ಆಗಸ್ಟ್ 2023, 16:27 IST
Last Updated 7 ಆಗಸ್ಟ್ 2023, 16:27 IST
ಅಕ್ಷರ ಗಾತ್ರ

ಮುಂಬೈ: ಟೊಮೆಟೊ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮವಾಗಿ ಶಾಕಾಹಾರಿ ಊಟ ಸಿದ್ಧಪಡಿಸುವ ವೆಚ್ಚವು ಜುಲೈನಲ್ಲಿ ಶೇಕಡ 28ರಷ್ಟು ಹೆಚ್ಚಾಯಿತು ಎಂದು ಕ್ರಿಸಿಲ್‌ ಸಂಸ್ಥೆ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಹಿಂದಿನ ವರ್ಷದ ಜುಲೈನ ಮಟ್ಟಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಊಟ ಸಿದ್ಧಪಡಿಸಲು ಬೇಕಿರುವ ವೆಚ್ಚ ಇಷ್ಟು ಹೆಚ್ಚಾಯಿತು ಎಂದು ಅದು ಹೇಳಿದೆ. ಮಾಂಸಾಹಾರಿ ಊಟ ಸಿದ್ಧಪಡಿಸುವ ವೆಚ್ಚವು ಶೇ 11ರಷ್ಟು ಹೆಚ್ಚಾಯಿತು.

ದೇಶದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಆಹಾರ ವಸ್ತುಗಳ ಸರಾಸರಿ ಬೆಲೆಯನ್ನು ಆಧರಿಸಿ, ಊಟ ಸಿದ್ಧಪಡಿಸುವ ವೆಚ್ಚವನ್ನು ಲೆಕ್ಕ ಹಾಕಲಾಗಿದೆ ಎಂದು ಕ್ರಿಸಿಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT