ಸೋನಿ ಕ್ಯಾಮೆರಾ ಮಳಿಗೆ ಆರಂಭ

ಶುಕ್ರವಾರ, ಮೇ 24, 2019
22 °C

ಸೋನಿ ಕ್ಯಾಮೆರಾ ಮಳಿಗೆ ಆರಂಭ

Published:
Updated:
Prajavani

ಬೆಂಗಳೂರು: ಸೋನಿ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಮೊದಲ ಸೋನಿ ಕ್ಯಾಮೆರಾ ಮಳಿಗೆಯನ್ನು ಆರಂಭಿಸಿದೆ.

ನಗರದ ಆನಂದ್‌ರಾವ್‌ ವೃತ್ತದ ಬಳಿ ಇರುವ ಬ್ರಿಗೇಡ್‌ ಪ್ಲಾಜಾದಲ್ಲಿ ಆರಂಭವಾಗಿರುವ ಈ ಮಳಿಗೆಯಲ್ಲಿ ಕಂಪನಿಯ ಆಲ್ಫಾ ಕ್ಯಾಮೆರಾಗಳ ಶ್ರೇಣಿ ಮತ್ತು ಕ್ಯಾಮೆರಾ ಬಿಡಿಭಾಗಗಳು ಲಭ್ಯವಿವೆ. ಕ್ಯಾಮೆರಾದ ಕಾರ್ಯಕ್ಷಮತೆ ಪರಿಶೀಲಿಸುವ ಅವಕಾಶ ಸಿಗಲಿದೆ. ಈ ವೇಳೆ ಗ್ರಾಹಕರಿಗೆ ಎದುರಾಗುವ ಸಂದೇಹಗಳನ್ನು ಪರಿಣತರು ನಿವಾರಿಸುತ್ತಾರೆ.

‘ಅತ್ಯಾಧುನಿಕ ಮತ್ತು ವೃತ್ತಿಪರ ಉಪಕರಣಗಳಿಗಾಗಿ ಸೋನಿಯವರ ನವೀನ ಕೊಡುಗೆಗಳ ಕಡೆಗೆ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಈ ಬೇಡಿಕೆಯನ್ನು ವಿಭಿನ್ನ ರೀತಿಯಲ್ಲಿ ಪೂರೈಸಲು, ನಾನು ನಮ್ಮ ಮೊದಲ ಸೋನಿ ಕ್ಯಾಮೆರಾ ಮಳಿಗೆಯನ್ನು ಪ್ರಾರಂಭಿಸಿದ್ದೇವೆ. ಇದು ನಮ್ಮ ಗ್ರಾಹಕರು ಸೂಕ್ತವಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಸಹಕರಿಸುತ್ತದೆ. ಚಿಲ್ಲರೆ ಮಾರಾಟ ಹೆಚ್ಚಿಸಲು ಈ ಮಳಿಗೆ ಇನ್ನೂ ಹೆಚ್ಚಿನ ಸಹಾಯ ಮಾಡಲಿದೆ’ ಎಂದು ಸೋನಿ ಇಂಡಿಯಾದ ಆಡಳಿತ ನಿರ್ದೇಶಕ ಸುನಿಲ್‌ ನಾಯರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !