ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋನಿ–ಜೀ ವಿಲೀನ ರದ್ದು

Published : 22 ಜನವರಿ 2024, 16:18 IST
Last Updated : 22 ಜನವರಿ 2024, 16:18 IST
ಫಾಲೋ ಮಾಡಿ
Comments

ನವದೆಹಲಿ: ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ (ಎಸ್‌ಪಿಎನ್‌ಐ) ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವಿನ ವಿಲೀನ ಒಪ್ಪಂದ ಸೋಮವಾರ ಮುರಿದು ಬಿದ್ದಿದೆ.

ಸೋನಿ ಗ್ರೂಪ್‌ ಕಾರ್ಪೋರೇಷನ್‌ ಭಾರತದಲ್ಲಿರುವ ತನ್ನ ವ್ಯವಹಾರವನ್ನು ಜೀ ಎಂಟರ್‌ಟೈನ್‌ಮೆಂಟ್‌ ಜೊತೆಗೆ ವಿಲೀನಗೊಳಿಸಲು ಮುಂದಾಗಿತ್ತು. 2021ರ ಡಿಸೆಂಬರ್‌ 22ರಂದು ₹83 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಎರಡೂ ಕಂಪನಿಗಳು ಒಪ್ಪಿಗೆ ನೀಡಿದ್ದವು. 2023ರ ಡಿಸೆಂಬರ್‌ 21ರೊಳಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಈ ಒಪ್ಪಂದವನ್ನು ಸೋನಿ ಕೊನೆಗೊಳಿಸಿದ್ದು, ಈ ಕುರಿತು ಜೀ ಕಂಪನಿಗೆ ಅಧಿಕೃತ ಪತ್ರ ರವಾನಿಸಿದೆ.‌

ಹಾಲಿ ಮುಖ್ಯ ಕಾರ್ಯ ನಿರ್ವಾಹಕ ಪುನೀತ್‌ ಗೋಯೆಂಕಾ ಅವರೇ ಹೊಸ ಸಂಸ್ಥೆಗೂ ಸಿಇಒ ಆಗಬೇಕು ಎಂದು ಜೀ ಕಂಪನಿ ಪಟ್ಟು ಹಿಡಿದಿತ್ತು. ಹಣ ದುರ್ಬಳಕೆ ಆರೋಪ ಸಂಬಂಧ ಅವರ ವಿರುದ್ಧ ಸೆಬಿ ತನಿಖೆ ನಡೆಸುತ್ತಿದೆ. ಹಾಗಾಗಿ, ಇದಕ್ಕೆ ಸೋನಿ ಆಕ್ಷೇಪ ವ್ಯಕ್ತಪಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT