ಜೂನ್ ಆರಂಭದಲ್ಲಿ 5ಜಿ ತರಂಗಾಂತರ ಹರಾಜು ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರವು ಜೂನ್ ತಿಂಗಳ ಆರಂಭದಲ್ಲಿ 5ಜಿ ತರಂಗಾಂತರ ಹರಾಜು ಹಾಕುವ ಸಾಧ್ಯತೆ ಇದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹರಾಜು ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆಯು ನಿರೀಕ್ಷಿತ ಕಾಲಮಿತಿಯಂತೆಯೇ ಕೆಲಸ ಮಾಡುತ್ತಿದೆ. ತರಂಗಾಂತರ ದರದ ಬಗ್ಗೆ ಉದ್ಯಮ ವಲಯ ಹೊಂದಿರುವ ಆತಂಕವನ್ನು ನಿವಾರಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆಗಸ್ಟ್–ಸೆಪ್ಟೆಂಬರ್ ವೇಳೆಗೆ ದೇಶದಲ್ಲಿ 5ಜಿ ಸೇವೆಗಳು ಬಳಕೆಗೆ ಲಭ್ಯವಾಗಲಿವೆ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.