ಈ ಎಂಆರ್‌ಒ ಕೇಂದ್ರವು ಪೂರ್ಣಗೊಂಡ ನಂತರ, ಭಾರತದಲ್ಲಿ ಪರಿಣತ 1,200 ವಿಮಾನಯಾನ ಎಂಜಿನಿಯರ್‌ಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (ಎಸ್‌ಎಂಇ) ಬೆಂಬಲ ನೀಡಲಿದೆ. ಈ ಹೊಸ ಉದ್ಯಮಗಳು ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿರುವುದರ ಜೊತೆಗೆ ರಾಜ್ಯದಲ್ಲಿ ಎಂಆರ್‌ಒ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿವೆ. ವಿಮಾನಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಚಟುವಟಿಕೆಗಳಿಗೆ ತರಬೇತಿ ಪಡೆದ ಸಿಬ್ಬಂದಿಯ ಲಭ್ಯತೆಗಾಗಿ ಬೆಂಗಳೂರಿನಲ್ಲಿ ನಿರ್ವಹಣಾ ತರಬೇತಿ ಸಂಸ್ಥೆ ಸ್ಥಾಪನೆ ಮಾಡುವುದಾಗಿ ಹೇಳಿದೆ.