ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಲಕ್ಷ ಗ್ರಾಹಕರಿಗೆ ಸಂಭವನೀಯ ಸೈಬರ್‌ ದಾಳಿಯ ಎಚ್ಚರಿಕೆ ನೀಡಿದ ಎಸ್‌ಬಿಐ

ಮೋಸದ ಇಮೇಲ್ ಬಂದೀತು ಜೋಕೆ
ಅಕ್ಷರ ಗಾತ್ರ
ADVERTISEMENT
""

ದೇಶದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಬಹುದು ಎಂದು ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 20 ಲಕ್ಷ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. 'ಫೆಡರಲ್ ಬ್ಯಾಂಕ್' ಸಹ ತನ್ನ ಗ್ರಾಹಕರಿಗೆ ಸೈಬರ್ ದಾಳಿ ನಡೆಯಬಹುದು,ಎಚ್ಚರದಿಂದಿರಿ'ಎಂಬಎಸ್‌ಎಂಎಸ್ ಕಳಿಸಿದೆ.

'ಎಚ್ಚರಿಕೆ ಭಾರತದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಬಹುದು ಎಂದು ನಮಗೆ ತಿಳಿದುಬಂದಿದೆ. ಇಮೇಲ್‌ಗಳನ್ನು ಚೆಕ್ ಮಾಡುವಾಗ ಹುಷಾರಾಗಿರಿ.ncov2019@gov.in ಎಂಬ ಇಮೇಲ್ ವಿಳಾಸದಿಂದ ಬರುವ,Free COVID-19 Testing ಎಂಬ ಸಬ್ಜೆಕ್ಟ್ ಲೈನ್ ಇರುವ ಇಮೇಲ್‌ಗಳನ್ನು ಕ್ಲಿಕ್ ಮಾಡಬೇಡಿ' ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿರುವ ಬಹುತೇಕ ನಿವಾಸಿಗಳಿಗೆ"Free Covid-19 Testing" ಸಬ್ಜೆಕ್ಟ್‌ ಲೈನ್ ಇರುವ ಇಮೇಲ್‌ಗಳು ಬರಬಹುದು ಎಂದು ಎಸ್‌ಬಿಐ ಮುನ್ನೆಚ್ಚರಿಕೆ ನೀಡಿದೆ.

ಫೇಕ್ ಇಮೇಲ್, ಸೋಷಿಯಲ್ ಮೀಡಿಯಾ ಪೋಸ್ಟ್ ಅಥವಾ ಎಸ್‌ಎಂಎಸ್‌ಗಳ ಬಗ್ಗೆ ಎಚ್ಚರದಿಂದಿರಿ.free Covid-19 (ಉಚಿತ ಕೋವಿಡ್-19 ತಪಾಸಣೆ) ಸಂದೇಶ ಹೊತ್ತು ಬರುವ ಪೋಸ್ಟ್‌ಗಳನ್ನು ಎಚ್ಚರದಿಂದ ಗಮನಿಸಿ ಎಂದುಸರ್ಕಾರದ ಭದ್ರತಾ ಏಜೆನ್ಸಿಗಳು ವ್ಯಾಪಾರಿ ಸಂಸ್ಥೆಗಳು ಮತ್ತು ನಾಗರಿಕರನ್ನು ಎಚ್ಚರಿಸಿದ ಬೆನ್ನಲ್ಲೇ ಎಸ್‌ಬಿಐ ಮತ್ತು ಫೆಡರಲ್ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ.

ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸೈಬರ್ ದಾಳಿಗಳು ತೀವ್ರಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತದ ಸೈಬರ್‌ ಸೆಕ್ಯುರಿಟಿ ಏಜೆನ್ಸಿಗಳೂ ನಾಗರಿಕರನ್ನು ಎಚ್ಚರಿಸಿದ್ದವು. ಕೋವಿಡ್ ಬಗ್ಗೆ ಜನರಿಗೆ ಇರುವ ಆತಂಕವನ್ನೇ ದುರುಪಯೋಗಪಡಿಸಿಕೊಂಡು,free Covid-19 tests ಸಾಲನ್ನು ಗಾಳವಾಗಿಸಿ ಜನರನ್ನು ಕಾಡುತ್ತಾರೆ ಎಂದು ಭದ್ರತಾ ಏಜೆನ್ಸಿಗಳು ಎಚ್ಚರಿಸಿದ್ದವು.

'ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್' (CERT-In) ಸಹ ಎಚ್ಚರಿಕೆಯ ಸಂದೇಶ ರವಾನಿಸಿದೆ. "ncov2019@gov.in" ಇಮೇಲ್ ವಿಳಾಸದಿಂದ ದುಷ್ಟರು ಇಮೇಲ್‌ಗಳನ್ನು ರವಾನಿಸಬಹುದು ಎಂದು ಸಿಇಆರ್‌ಟಿ ಎಚ್ಚರಿಸಿದೆ.

ಫೆಡರಲ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕಳಿಸಿರುವ ಎಸ್‌ಎಂಎಸ್

ಸ್ಥಳೀಯ ನಗರಾಡಳಿತ ಸಂಸ್ಥೆಗಳು ಮತ್ತು ಕೋವಿಡ್-19 ನಿರ್ವಹಿಸುತ್ತಿರುವ ಸರ್ಕಾರಿ ಸಂಸ್ಥೆಗಳ (ನಗರಸಭೆ, ಪೊಲೀಸರು, ಆರೋಗ್ಯ ಇಲಾಖೆ ಇತ್ಯಾದಿ) ಹೆಸರಿನಲ್ಲಿ ಇಂಥ ಇಮೇಲ್‌ಗಳು ಬರಬಹುದು. ತಮ್ಮನ್ನು ಬೆಂಬಲಿಸುವಂತೆ ಇಮೇಲ್‌ನಲ್ಲಿ ವಿನಂತಿಸಬಹುದು ಎಂದು ಸಿಇಆರ್‌ಟಿ ವಿಶ್ಲೇಷಿಸಿದೆ.

'ಇಂಥ ಇಮೇಲ್‌ಗಳನ್ನು ಕ್ಲಿಕ್ ಮಾಡಿದಾಗ ಅವು ಬೇರೊಂದು ವೆಬ್‌ಸೈಟ್ ಕ್ಲಿಕ್ ಮಾಡುವಂತೆ ಸೂಚಿಸುತ್ತವೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರ ಕೇಳುತ್ತಾರೆ. ಒಮ್ಮೆ ನಿಮ್ಮ ವಿವರ ಸಂಗ್ರಹವಾದ ನಂತರ ಅವರ ಕರಾಮತ್ತು ತೋರುತ್ತಾರೆ' ಎಂದು ಸಿಇಆರ್‌ಟಿ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT