ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿದ್ದು, ಅಂದು ದೇಶದ ಷೇರುಪೇಟೆ ವಹಿವಾಟು ನಡೆಯಲಿದೆ.

ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರ ವರೆಗೆ ಷೇರುಪೇಟೆ ಕಾರ್ಯನಿರ್ವಹಿಸಲಿದೆ ಎಂದು ಈಗಾಗಲೇ ಬಿಎಸ್ಇ ಮತ್ತು ಎನ್ಎಸ್ಇ ತಿಳಿಸಿದೆ.

ಸಾಮಾನ್ಯವಾಗಿ ಭಾನುವಾರ ಷೇರುಪೇಟೆಗೆ ರಜೆ ಇರಲಿದ್ದು, ವಹಿವಾಟು ನಡೆಯುವುದಿಲ್ಲ. ಆದರೆ, ಈ ಬಾರಿ ಭಾನುವಾರ ಬಜೆಟ್ ಮಂಡನೆ ಆಗಲಿದ್ದು, ವಿಶೇಷ ವಹಿವಾಟು ನಡೆಯಲಿದೆ.
.Union Budget-2026: ಸತತ 9ನೆಯ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್.
ದೀಪಾವಳಿ ದಿನ ಒಂದು ಗಂಟೆ

ಸಾಮಾನ್ಯವಾಗಿ ಹಬ್ಬ ಹಾಗೂ ರಾಷ್ಟ್ರೀಯ ರಜೆ ದಿನಗಳಲ್ಲಿ ಷೇರುಪೇಟೆ ಮುಚ್ಚಿರುತ್ತವೆ. ಆದರೆ, ದೀಪಾವಳಿಯ ಲಕ್ಷ್ಮೀ ಪೂಜೆ ಸಮಯದಲ್ಲಿ ಸಂಜೆ ಒಂದು ಗಂಟೆ ವಹಿವಾಟು ನಡೆಸಲಾಗುತ್ತದೆ. ಇದನ್ನು ಶುಭ ಮುಹೂರ್ತದ ಟೇಡಿಂಗ್ ಎಂದು ಕರೆಯಲಾಗುತ್ತದೆ. ಈ ಸಂದರ್ಭ ಹೂಡಿಕೆ ಮಾಡಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ.
.ಕೇಂದ್ರ ಬಜೆಟ್ | HRA ವಿನಾಯಿತಿ ಏರಿಕೆ: ಸಾಕಾರವಾಗಬಹುದೇ ಬೆಂಗಳೂರಿಗರ ನಿರೀಕ್ಷೆ?.
ಬಜೆಟ್ ದಿನದ ಟ್ರೇಡಿಂಗ್ ನಿಯಮ ಮತ್ತು ಸಮಯ

ಬಜೆಟ್ ದಿನದ ಷೇರುಪೇಟೆಯ ವಹಿವಾಟುವೆಂದಿನಂತೆ ಬೆಳಿಗ್ಗೆ 9.15ಕ್ಕೆ ಆರಂಭವಾಗಿ 3.30ಕ್ಕೆ ಅಂತ್ಯಗೊಳ್ಳುತ್ತದೆ. ಬೆಳಿಗ್ಗೆ 9 ಪ್ರೀಟ್ರೇಡಿಂಗ್ ಸೆಷನ್ ಆಗಿರುತ್ತದೆ. ಆಪ್ಷನ್ ಟ್ರೇಡಿಂಗ್ ನಿಯಮಗಳು ಎಂದಿನಂತೆಯೇ ಇರಲಿವೆ.

ಈಕ್ವಿಟಿ, ಫ್ಯೂಚರ್ಸ್, ಆಪ್ಷನ್ ಮತ್ತು ಕಮಾಡಿಟಿ ಸೇರಿದಂತೆ ಪ್ರಮುಖ ಸೆಗ್ಮೆಂಟ್ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆಯಾದರೂ, ಆಯ್ದ ವಿಶೇಷ ಸೆಗ್ನೆಂಟ್ ನಡೆಯುವುದಿಲ್ಲ ಎಂದು ಬಿಎಸ್ಇ ಸ್ಪಷ್ಟಪಡಿಸಿದೆ.
.ಕೇಂದ್ರ ಬಜೆಟ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಹಾಯ ಮಾಡುವವರು ಇವರು....
ಕಮಾಡಿಟಿ ಪೇಟೆ

ಕಮಾಡಿಟಿ ಮಾರುಕಟ್ಟೆಗಳು ಸಹ ತೆರೆದಿರುತ್ತವೆ. ನಿಯಮಿತ ಸಮಯವನ್ನು ಅನುಸರಿಸಿ MCX ವಿಶೇಷ ನೇರ ವ್ಯಾಪಾರ ಅವಧಿಯನ್ನು ನಡೆಸುತ್ತದೆ. MCX ನ ಪ್ರೀಓಪನ್ ಅವಧಿ ಬೆಳಿಗ್ಗೆ 8:45ಕ್ಕೆ ಪ್ರಾರಂಭವಾಗಿ ಬೆಳಿಗ್ಗೆ 8:59ರವರೆಗೆ ನಡೆಯಲಿದೆ, ಸಾಮಾನ್ಯ ಟ್ರೇಡಿಂಗ್ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಇರುತ್ತದೆ. ಕ್ಲೈಂಟ್ ಕೋಡ್ ಮಾರ್ಪಾಡುಗಳನ್ನು ಸಂಜೆ 5:15 ರವರೆಗೆ ಅನುಮತಿಸಲಾಗುತ್ತದೆ. ಬಜೆಟ್ ಅವಧಿಯಲ್ಲಿ ಘೋಷಣೆಗಳ ಆಧಾರದಲ್ಲಿ ಚಿನ್ನ, ಬೆಳ್ಳಿ, ಕಚ್ಚಾ ತೈಲ ಮತ್ತು ಕೃಷಿ ಸಂಬಂಧಿತ ಸರಕು ಟ್ರೇಡಿಂಗ್ ನೈಜ ಸಮಯದ ಪ್ರತಿಕ್ರಿಯೆಯೊಂದಿಗೆ ನಿರಂತರ ನಡೆಯುತ್ತದೆ.

ಬಜೆಟ್ ಮೇಲೆ ನಿರೀಕ್ಷೆ

ಮಾರುಕಟ್ಟೆ ಭಾವನೆಗಳು ಅತ್ಯಂತ ಸೂಕ್ಷ್ಮವಾಗಿರುವ ಸಮಯದಲ್ಲಿ ಈ ವರ್ಷದ ಬಜೆಟ್ ಮಂಡಿಸಲಾಗುತ್ತಿದೆ. ಇತ್ತೀಚಿನ ಏರಿಳಿತಗಳು ಮತ್ತು ಜಾಗತಿಕ ಅನಿಶ್ಚಿತತೆಗಳು ಅಪಾಯದ ಸೂಚನೆ ನೀಡಿವೆ. ಹಾಗಾಗಿ, ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಿದೆ. ಬಂಡವಾಳ ವೆಚ್ಚದ ಮೂಲಕ ಬೆಳವಣಿಗೆಗೆ ಬೆಂಬಲವನ್ನು ಕಾಯ್ದುಕೊಳ್ಳುವಾಗ ಸರ್ಕಾರವು ಹಣಕಾಸಿನ ಬಲವರ್ಧನೆಗೆ ಬದ್ಧವಾಗಿರುತ್ತದೆ ಎಂಬ ನಿರೀಕ್ಷೆಯನ್ನು ವಿಶ್ಲೇಷಕರು ಹೊಂದಿದ್ದಾರೆ. ರಕ್ಷಣೆ, ಮೂಲಸೌಕರ್ಯ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ ಯೋಜನೆಗಳ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.