ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರು ಲಕ್ಷ ಮಂದಿಯ ಮಾಹಿತಿ ಕಳ್ಳತನ

Last Updated 8 ಡಿಸೆಂಬರ್ 2022, 16:03 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕವಾಗಿ ಒಟ್ಟು ಐವತ್ತು ಲಕ್ಷ ಜನರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕದಿಯಲಾಗಿದೆ. ಭಾರತದ ಆರು ಲಕ್ಷ ಮಂದಿಯ ದತ್ತಾಂಶಗಳನ್ನು ಕೂಡ ಕದಿಯಲಾಗಿದೆ. ಪ್ರತಿ ವ್ಯಕ್ತಿಯ ದತ್ತಾಂಶವನ್ನು ಸರಾಸರಿ ₹ 490ರಂತೆ ಮಾರಾಟ ಮಾಡಲಾಗಿದೆ ಎಂದು ವಿಪಿಎನ್ ಸೇವೆಗಳನ್ನು ಒದಗಿಸುವ ನಾರ್ಡ್‌ವಿಪಿಎನ್‌ ಕಂಪನಿ ಹೇಳಿದೆ.

ಬಳಕೆದಾರರ ಲಾಗಿನ್‌ ವಿವರ, ಕುಕಿ, ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ಡಿಜಿಟಲ್ ಮಾಹಿತಿಗಳನ್ನು ಕಳ್ಳತನ ಮಾಡಲಾಗಿದೆ, ನಂತರ ಅವುಗಳನ್ನು ಮಾರಲಾಗಿದೆ. 2018ರ ನಂತರದ ದತ್ತಾಂಶಗಳನ್ನು ಪರಿಶೀಲಿಸಿ ನಾರ್ಡ್‌ವಿಪಿಎನ್ ಈ ವಿವರ ನೀಡಿದೆ.

ಗೂಗಲ್‌, ಮೈಕ್ರೊಸಾಫ್ಟ್‌ ಹಾಗೂ ಫೇಸ್‌ಬುಕ್‌ ಖಾತೆಗಳ ಲಾಗಿನ್‌ ವಿವರಗಳು ಕೂಡ ಕದ್ದ ದತ್ತಾಂಶಗಳಲ್ಲಿ ಸೇರಿವೆ ಎಂಬುದನ್ನು ನಾರ್ಡ್‌ವಿಪಿಎನ್‌ ಅಧ್ಯಯನವು ಕಂಡುಕೊಂಡಿದೆ. ಬಾಟ್ ಮಾರ್ಕೆಟ್ ಮೂಲಕ ದತ್ತಾಂಶ ಮಾರಾಟ ಮಾಡಲಾಗಿದೆ. ವೆಬ್‌ಕ್ಯಾಮ್ ಮೂಲಕ ತೆಗೆದ ಚಿತ್ರಗಳು ಕೂಡ ಕದ್ದ ದತ್ತಾಂಶಗಳಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT