ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆ. 26ರಿಂದ ಅರಮನೆ ಮೈದಾನದಲ್ಲಿ ಸರ್ಫೇಸ್‌ ಎಕ್ಸ್‌ಪೋ

Published : 24 ಸೆಪ್ಟೆಂಬರ್ 2024, 14:48 IST
Last Updated : 24 ಸೆಪ್ಟೆಂಬರ್ 2024, 14:48 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಸೆಪ್ಟೆಂಬರ್ 26ರಿಂದ 28ರ ವರೆಗೆ ಮೊದಲ ಬಾರಿಗೆ ಸರ್ಫೇಸ್ ಎಕ್ಸ್‌ಪೋ–2024 ಆಯೋಜಿಸಲಾಗಿದೆ ಎಂದು ಲಘು ಉದ್ಯೋಗ ಭಾರತೀ- ಬೆಂಗಳೂರು ಉತ್ತರದ ಅಧ್ಯಕ್ಷ ಸಂಜಯ್ ಪಿ. ಭಟ್ ತಿಳಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಕ್ಷಣಾ, ವಾಯುಯಾನ, ಸಾರ್ವಜನಿಕ ಕ್ಷೇತ್ರದ ಉಪಕ್ರಮಗಳು  ಸೇರಿ ವಿವಿಧ ಕ್ಷೇತ್ರದ ಪ್ರಮುಖ ಪ್ರದರ್ಶಕರಿಂದ ಮೇಲ್ಮೈ ಲೇಪನ ನಾವೀನ್ಯದ ಪ್ರದರ್ಶನವಿದೆ ಎಂದು ಹೇಳಿದ್ದಾರೆ.

ಕೇಂದ್ರ ಎಂಎಸ್‌ಎಂಇ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಎಕ್ಸ್‌ಪೋ ಕೈಗಾರಿಕಾ ತಜ್ಞರಿಗೆ ಮುಂದಿನ ತಂತ್ರಜ್ಞಾನಗಳನ್ನು ಅನ್ವೇಷಿಸಲು ಮತ್ತು ನೆಟ್‌ವರ್ಕಿಂಗ್ ಹಾಗೂ ಅವಕಾಶ ವೃದ್ಧಿಗೆ ಪ್ರಮುಖ ವೇದಿಕೆಯನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT