ನವದೆಹಲಿ: ತಮ್ಮಿಷ್ಟದ ಹೋಟೆಲ್ನ ಇಷ್ಟದ ತಿನಿಸುಗಳನ್ನು ಕೇವಲ ಹತ್ತು ನಿಮಿಷಗಳಲ್ಲಿ ತಲುಪಿಸುವ ‘ಬೋಲ್ಟ್’ ಸೇವೆಯನ್ನು 400 ನಗರಗಳಿಗೆ ವಿಸ್ತರಿಸುತ್ತಿರುವುದಾಗಿ ಮನೆ ಬಾಗಿಲಿಗೆ ಆಹಾರವನ್ನು ತಲುಪಿಸುವ ಸ್ವಿಗ್ಗಿ ಕಂಪನಿ ಹೇಳಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್, ನವದೆಹಲಿ, ಮುಂಬೈ ಹಾಗೂ ಪುಣೆಯಲ್ಲಿ ಈಗಾಗಲೇ ಈ ಸೇವೆ ಲಭ್ಯವಿದೆ. ಇದೀಗ ಜೈಪುರ, ಲಖನೌ, ಅಹಮದಾಬಾದ್, ಇಂದೋರ್, ಕೊಯಮತ್ತೂರ್, ಕೊಚ್ಚಿಯಂತ ನಗರಗಳಲ್ಲೂ ಆರ್ಡರ್ ಮಾಡಿದ ಆಹಾರ ಹತ್ತು ನಿಮಿಷಗಳ ಒಳಗಾಗಿ ಪೂರೈಸಲಾಗುವುದು ಎಂದು ಸ್ವಿಗ್ಗಿ ಹೇಳಿದೆ.

ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ತಮಿಳುನಾಡು, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಪಂಜಾಬ್ನ ಪಟ್ಟಣ ಪ್ರದೇಶಗಳಿಗೂ ಈ ಬೋಲ್ಟ್ ಸೇವೆಯನ್ನು ಸ್ವಿಗ್ಗಿ ಪರಿಚಯಿಸಿದೆ.

‘ಈ ಬೋಲ್ಟ್ ಸೇವೆಯು 2 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಕಾರ್ಯಾಚರಣೆಗೊಳ್ಳಲಿದೆ. ಆಹಾರ ತಲುಪಿಸುವ ವ್ಯಕ್ತಿಗೆ ಇದು ಬೋಲ್ಟ್ ಅಥವಾ ಸಾಮಾನ್ಯ ಡೆಲಿವರಿ ಎಂಬುದು ತಿಳಿಯದು. ಹೀಗಾಗಿ ಅವರ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಹೇರುತ್ತಿಲ್ಲ. ಬದಲಿಗೆ ಹೋಟೆಲ್ನಲ್ಲಿ ತ್ವರಿತ ಪೂರೈಕೆಗಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಆಹಾರವನ್ನು ಶೀಘ್ರದಲ್ಲಿ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ.

‘ಈ ಯೋಜನೆಯನ್ನು ತ್ವರಿತ ಡೆಲಿವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಹಾರ ತಾಜಾತನ, ರುಚಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಸ್ವಗ್ಗಿ ಕಂಪನಿಯು ಈ ಯೋಜನೆಗಾಗಿ ಸುಮಾರು 40 ಸಾವಿರ ರೆಸ್ಟೂರೆಂಟ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಆ ಮೂಲಕ 10 ಲಕ್ಷ ತರಹೇವಾರಿ ಆಹಾರಗಳನ್ನು ಪೂರೈಕೆ ಮಾಡಲು ಸಜ್ಜಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.