ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾದಿಂದ ವಿಸ್ಟ್ರಾನ್‌ ಖರೀದಿ?

Published 14 ಜುಲೈ 2023, 15:38 IST
Last Updated 14 ಜುಲೈ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ವಿಸ್ಟ್ರಾನ್ ಕಂಪನಿಯು ಕರ್ನಾಟಕದಲ್ಲಿ ಹೊಂದಿರುವ ತಯಾರಿಕಾ ಘಟಕವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಟಾಟಾ ಸಮೂಹವು ಮುಂದಾಗಿದೆ, ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಈ ಸ್ವಾಧೀನ ಸಾಧ್ಯವಾದರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿ ‘ಟಾಟಾ’ ಆಗಲಿದೆ.

ಟಾಟಾ ಸನ್ಸ್ ಕಂಪನಿಯು ತನ್ನ ಅಂಗಸಂಸ್ಥೆಯಾದ ಟಾಟಾ ಎಲೆಕ್ಟ್ರಾನಿಕ್ಸ್ ಮೂಲಕ ಈ ಸ್ವಾಧೀನ ಪೂರ್ಣಗೊಳಿಸಲಿದೆ. ಆದರೆ ಈ ಕುರಿತು ಟಾಟಾ ಸಮೂಹದಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ವಿಸ್ಟ್ರಾನ್ ಕಂಪನಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ಟಾಟಾ ಸಮೂಹವು ಈ ಘಟಕವನ್ನು ಸ್ವಾಧೀನಕ್ಕೆ ತೆಗೆದುಕೊಂಡ ನಂತರದಲ್ಲಿ ಐಫೋನ್ ಮಾತ್ರವೇ ಅಲ್ಲದೆ, ಆ್ಯಪಲ್‌ ಕಂಪನಿಯ ಇತರ ಹೊಸ ಉತ್ಪನ್ನಗಳನ್ನು ಕೂಡ ಈ ಘಟಕದಲ್ಲೇ ಸಿದ್ಧಪಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT