ಬೆಂಗಳೂರು: ದೇಶದ ಪ್ರಮುಖ ಡಿಟಿಎಚ್ ಸೇವಾದಾರ ಕಂಪನಿ ಟಾಟಾ ಸ್ಕೈ, ಹೆಸರು ಬದಲಾಯಿಸಿಕೊಳ್ಳಲಿದೆ. ಸ್ಕೈ ಹೆಸರನ್ನು ಕೈಬಿಡಲಾಗುತ್ತಿದ್ದು, ಹೊಸದಾಗಿ ಟಾಟಾ ಪ್ಲೇ ಅಸ್ತಿತ್ವಕ್ಕೆ ಬರಲಿದೆ.
ಜತೆಗೆ ಒಟಿಟಿ ಸೇವೆಗಳನ್ನು ಕೂಡ ಟಾಟಾ ಪ್ಲೇ ಗ್ರಾಹಕರಿಗೆ ಒದಗಿಸಲಿದೆ.
ಬಿಂಜ್ ಹೆಸರಿನ ಹೊಸ ಪ್ಯಾಕೇಜ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್ ಸಹಿತ 14 ವಿವಿಧ ಒಟಿಟಿ ಸೇವೆಗಳು ಲಭ್ಯವಾಗಲಿದೆ.
ಗ್ರಾಹಕರು ಬಯಸುವ ರೀತಿಯಲ್ಲಿ ಒಟಿಟಿ ಸೇವೆಗಳ ಸಹಿತ ವಿವಿಧ ಪ್ಯಾಕೇಜ್‌ಗಳು ದೊರೆಯಲಿದೆ.
ಟಾಟಾ ಪ್ಲೇ ನೆಟ್‌ಫ್ಲಿಕ್ಸ್ ಕಾಂಬೊ ಪ್ಯಾಕ್ ದರ ತಿಂಗಳಿಗೆ ₹399 ರಿಂದ ಆರಂಭವಾಗಲಿದ್ದು, ಜನವರಿ 27ರಿಂದಲೇ ದೊರೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.