ನವದೆಹಲಿ (ಪಿಟಿಐ): ಕೋಲಾರದ ನರಸಾಪುರದಲ್ಲಿ ಇರುವ ಐಫೋನ್ ತಯಾರಿಕಾ ಘಟಕವನ್ನು ಟಾಟಾ ಸಮೂಹಕ್ಕೆ ಮಾರಾಟ ಮಾಡಲು ತೈವಾನ್‌ನ ವಿಸ್ಟ್ರಾನ್ ಸಮೂಹವು ಒಪ್ಪಿಗೆ ನೀಡಿದೆ. ಇದರಿಂದಾಗಿ ಐಫೋನ್ ತಯಾರಿಸುವ ಭಾರತದ ಮೊದಲ ಕಂಪನಿ ಎನ್ನುವ ಹೆಗ್ಗಳಿಕೆಗೆ ‘ಟಾಟಾ’ ಪಾತ್ರವಾಗಲಿದೆ.
ವಿಸ್ಟ್ರಾನ್ ಇನ್ಫೊಕಾಮ್ ಮ್ಯಾನುಫ್ಯಾಕ್ಚರಿಂಗ್ (ಇಂಡಿಯಾ) ಪ್ರವೇಟ್ ಲಿಮಿಟೆಡ್ ಅನ್ನು ಟಾಟಾ ಎಲೆಕ್ಟ್ರಾನಿಕ್ಸ್‌ಗೆ ₹1,040 ಕೋಟಿಗೆ ಮಾರಾಟ ಮಾಡಲು ವಿಸ್ಟ್ರಾನ್ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ.
ಒಂದು ವರ್ಷದ ದೀರ್ಘ ಮಾತುಕತೆಯ ಬಳಿಕ ಖರೀದಿ ಒಪ್ಪಂದಕ್ಕೆ ಬರಲಾಗಿದೆ. ಈ ಘಟಕದಲ್ಲಿ 10 ಸಾವಿರಕ್ಕೂ ಅಧಿಕ ಕೆಲಸಗಾರರಿದ್ದಾರೆ.
ವಿಸ್ಟ್ರಾನ್ ಘಟಕ ಖರೀದಿಸುವ ಒಪ್ಪಂದ ಆಗಿರುವುದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ‘ಎಕ್ಸ್’ನಲ್ಲಿ ಟಾಟಾ ಕಂಪನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎರಡೂವರೆ ವರ್ಷಗಳಲ್ಲಿ ಟಾಟಾ ಕಂಪನಿಯು ದೇಶಿ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತವು ಐಫೋನ್‌ಗಳನ್ನು ತಯಾರಿಕೆ ಆರಂಭಿಸಲಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.