ಮುಂಬೈ: ದೇಶದ ಅತಿ ದೊಡ್ಡ ಐಟಿ ಸೇವಾ ಕಂಪನಿಯಾದ ಟಿಸಿಎಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೆ. ಕಾರ್ತಿವಾಸನ್ ಅವರ ಪ್ರಸಕ್ತ ಸಾಲಿನ ವಾರ್ಷಿಕ ವೇತನ ₹26.52 ಕೋಟಿಗೆ ಹೆಚ್ಚಳವಾಗಿದೆ.

ಕಾರ್ತಿವಾಸನ್ ಅವರ ವಾರ್ಷಿಕ ವೇತನ ಶೇ 4.6ರಷ್ಟು ಹೆಚ್ಚಳವಾಗಿದೆ. ಈ ವೇತನವು ಕಂಪನಿಯಲ್ಲಿರುವ 6.07 ಲಕ್ಷ ನೌಕರರ ಸರಾಸರಿ ವೇತನಕ್ಕಿಂತ 330 ಪಟ್ಟು ಅಧಿಕ ಎಂದು ಟಿಸಿಎಸ್ನ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಕಾರ್ತಿವಾಸನ್ ಅವರ ಮೂಲ ವೇತನ ₹1.39 ಕೋಟಿ, ಇತರ ಪ್ರಯೋಜನಗಳ ಮೌಲ್ಯ ₹2.13 ಕೋಟಿ, ಇತರ ಭತ್ಯೆಗಳು ₹23 ಕೋಟಿ ಒಳಗೊಂಡಿದೆ. ಮಾಸಿಕ ₹2.21 ಕೋಟಿ ವೇತನವನ್ನು ಇವರು ಪಡೆಯಲಿದ್ದಾರೆ.

ನೌಕರರ ವೇತನ ಶೇ 5.5ಕ್ಕಿಂತ ಶೇ 7.8ರಷ್ಟು ಹೆಚ್ಚಳ

ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಸೆಕ್ಸಾರಿಯಾ ಅವರ ವೇತನ ಶೇ 7.8ರಷ್ಟು ಏರಿಕೆಯಾಗಿದೆ. ಕಂಪನಿಯ ಒಟ್ಟು ನೌಕರರ ಸರಾಸರಿ ವೇತನವು ಶೇ 5.5ರಿಂದ ಶೇ 7.5ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನಲ್ಲಿ 1.1 ಲಕ್ಷ ನೌಕರರಿಗೆ ಬಡ್ತಿ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಕೆಲಸ ಮಾಡುತ್ತಿರುವ ನೌಕರರಲ್ಲಿ ಅತ್ಯುತ್ತಮ ಸಾಧಕರ ವೇತನ ದ್ವಿಗುಣಗೊಂಡಿದೆ. ಕಂಪನಿಗೆ ಹೊಸದಾಗಿ ಸೇರಿಕೊಂಡ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆರತಿ ಸುಬ್ರಮಣಿಯನ್ ಅವರ ವೇತನ ಮಾಸಿಕ ₹10.8 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.

ಟಿಸಿಎಸ್ ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಗೆ 2025ರಲ್ಲಿ ₹2,630 ಕೋಟಿ ಮೀಸಲಿಟ್ಟಿದೆ. ಇದು ಕಳೆದ ಸಾಲಿಗೆ ಹೋಲಿಸಿದಲ್ಲಿ 80 ಕೋಟಿ ಕಡಿಮೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ನೀತಿ ನಿರೂಪಣೆಯಲ್ಲಿ ಅಸ್ಥಿರತೆಯು ಆರ್ಥಿಕ ಸವಾಲುಗಳನ್ನು ಸೃಷ್ಟಿಸಿದೆ. ಆದರೆ ಇವುಗಳಿಗೆ ಮಾರ್ಗೋಪಾಯಗಳೂ ಇವೆ ಎಂದು ಕಂಪನಿ ಹೇಳಿದೆ.

ಕಂಪನಿಯಲ್ಲಿ ಸದ್ಯ 6.07 ಲಕ್ಷ ನೌಕರರಿದ್ದು ಇವರಲ್ಲಿ ಮಹಿಳೆಯರ ಸಂಖ್ಯೆ 2.14 ಲಕ್ಷ (ಶೇ 35) ಇದೆ. ಆರ್ಥಿಕ ವರ್ಷದಲ್ಲಿ 125 ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಕಳೆದ ವರ್ಷ ಇದರ ಸಂಖ್ಯೆ 110 ಇತ್ತು. ಇವುಗಳಲ್ಲಿ 23 ದೂರುಗಳು ವಿಚಾರಣೆ ಹಂತದಲ್ಲಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.