ಬೆಂಗಳೂರು: ಮಣ್ಣಿನಲ್ಲಿ ಸುಲಭವಾಗಿ ಕರಗಲಿವೆ ಎಂದು ಹೇಳಲಾಗುವ ಜೈವಿಕ ಮಿಶ್ರಣದ ಪಾಲಿಥೀನ್ ಚೀಲಗಳನ್ನು ಪರೀಕ್ಷಿಸಿ ದೃಢೀಕರಿಸಲು ಬೆಂಗಳೂರಿನ ಇಬ್ಹಾನ್ ಟೆಕ್ ಸೊಲುಷನ್ಸ್ ಕಂಪನಿಯು ಕ್ಯುಆರ್ ಕೋಡ್ ಕಂಡು ಹಿಡಿದಿದೆ.

ದಿನೇ ದಿನೇ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಹೆಚ್ಚುತ್ತಿದೆ. ಇವು ಮಣ್ಣಿನಲ್ಲಿ ಸುಲಭವಾಗಿ ಕರಗದಿರುವುದರಿಂದ ಪರಿಸರಕ್ಕೆ ವ್ಯಾಪಕ ಹಾನಿ ಉಂಟಾಗುತ್ತಿದೆ. ಜೈವಿಕ ಪ್ಲಾಸ್ಟಿಕ್ ಚೀಲಗಳು ಪರಿಸರ ಸ್ನೇಹಿಯಾಗಿವೆ. ಆದರೆ, ಮಾರುಕಟ್ಟೆಯಲ್ಲಿ ಜೈವಿಕ ಮಿಶ್ರಣದ ನಕಲಿ ಪಾಲಿಥೀನ್ ಚೀಲಗಳ ಮಾರಾಟ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ಈ ತಂತ್ರಜ್ಞಾನ ನೆರವಾಗಲಿದೆ.

‘ಪ್ಲಾಸ್ಟಿಕ್ ಚೀಲಗಳ ಬಳಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿದ್ದಂತೆ ಕೆಲವರು ಮಣ್ಣಿನಲ್ಲಿ ಸುಲಭವಾಗಿ ಕರಗುವ ಬ್ಯಾಗ್ಗಳನ್ನು ತಯಾರಿಸಲಾಗುತ್ತಿದೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇಂತಹ ಬ್ಯಾಗ್ಗಳ ಗುಣಮಟ್ಟ ಪರೀಕ್ಷಿಸುವ ಯಾವುದೇ ವ್ಯವಸ್ಥೆ ಇದ್ದಿರಲಿಲ್ಲ. ಈ ಕ್ಯುಆರ್ ಕೋಡ್ ತಂತ್ರಜ್ಞಾನವು ಆ ಕೊರತೆಯನ್ನು ನಿವಾರಿಸಿದೆ’ ಎಂದು ಇಬ್ಹಾನ್ ಡಿಜಿಟಲ್ ಅಡ್ವಾನ್ಸ್ ಸೊಲುಷನ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಎಸ್. ಸಾಯಿರಾಂ ಹೇಳಿದ್ದಾರೆ.

ಮೊಬೈಲ್ ಆ್ಯಪ್ ಮೂಲಕ ಜೈವಿಕ ಮಿಶ್ರಣದ ಪಾಲಿಥೀನ್ ಚೀಲ ತಯಾರಿಸುವವರು, ಪೂರೈಕೆದಾರರು ಮತ್ತಿತರ ವಿವರಗಳನ್ನು ಪಡೆಯಬಹುದಾಗಿದೆ. ಇದರಿಂದ ಇಂತಹ ಚೀಲಗಳ ಅಸಲಿತನವನ್ನು ಪತ್ತೆ ಹಚ್ಚ
ಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.