ಅಸಲಿ–ನಕಲಿ ಪತ್ತೆಗೆ ತಂತ್ರಜ್ಞಾನ

7

ಅಸಲಿ–ನಕಲಿ ಪತ್ತೆಗೆ ತಂತ್ರಜ್ಞಾನ

Published:
Updated:
Deccan Herald

ವಸ್ತು–ಉಪಕರಣಗಳಿಂದ ಹಿಡಿದು, ಆಹಾರ–ಔಷಧಿಯವರೆಗೆ ಎಲ್ಲಕ್ಕೂ ಅಂತರ್ಜಾಲವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಬಗೆಬಗೆಯ ವೆಬ್‌ಸೈಟ್‌ಗಳು, ಆ್ಯಪ್‌ಗಳು ಲಭ್ಯ ಇವೆ.

ಕೆಲಸ ಸುಲಭವಾಗಲೆಂದು ತಂತ್ರಜ್ಞಾನವನ್ನು ಈ ರೀತಿ ಬಳಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ನಕಲಿ ವಸ್ತು–ಉತ್ಪನ್ನಗಳನ್ನು ಸೃಷ್ಟಿಸಿ ಮೋಸ ಮಾಡುವವರ ಹಾವಳಿಯೂ ಹೆಚ್ಚಾಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಅಸಲಿ–ನಕಲಿಗಳ ನಡುವಣ ವ್ಯತ್ಯಾಸ ಗುರುತಿಸಲು ನೆರವಾಗುವ ಕೆಲವು ತಂತ್ರಜ್ಞಾನಗಳು ಬಳಕೆಗೆ ಬಂದಿವೆ.

ನ್ಯೂರೊಟ್ಯಾಗ್ಸ್

ವಸ್ತು–ಉತ್ಪನ್ನಗಳ ಮೇಲೆ ಬಾರ್‌ಕೋಡ್‌ಗಳು ಮುದ್ರಿತವಾಗಿರುವುದನ್ನು ನೋಡಿರುತ್ತೇವೆ. ಈ ಬಾರ್‌ಕೋಡ್‌ಗಳ ರೀತಿಯಲ್ಲೇ ಖರೀದಿಸಿದ ವಸ್ತು ಅಸಲಿಯೊ, ನಕಲಿಯೊ ಎಂದು ತಿಳಿಸುವ ‘ನ್ಯುರೊಟ್ಯಾಗ್ಸ್‌’ ಬಳಕೆಗೆ ಬಂದಿವೆ. ಇದು ನೋಡುವುದಕ್ಕೆ ಕ್ಯುಆರ್ ಕೋಡ್‌ ರೀತಿ ಇರುತ್ತದೆ. ಬೆಲೆಯ ಟ್ಯಾಗ್‌ ಜತೆಗೆ ಇವನ್ನು ಜೋಡಿಸಲಾಗುತ್ತದೆ. ಸ್ಕ್ಯಾನ್‌ ಮಾಡಿದರೆ ಉತ್ಪನ್ನದ ಅಧಿಕೃತ ಮಾಹಿತಿ ಸಿಗುತ್ತದೆ.

ಅದೇ ರೀತಿ ಉತ್ಪನ್ನಕ್ಕೆ ಸಂಬಂಧಿಸಿದ ವಾರಂಟಿ ವಿವರಗಳ ನಿರ್ವಹಣೆಗಾಗಿ ಸ್ಕ್ರ್ಯಾಚ್‌ ಕಾರ್ಡ್‌ (Scratch Card) ರೂಪದ ಮತ್ತೊಂದು ಕಾರ್ಡ್‌ ಅನ್ನೂ ಕೆಲವು ಸಂಸ್ಥೆಗಳು ಜೋಡಿಸುತ್ತಿವೆ. ಖರೀದಿಸಿದ ನಂತರ ಕಾರ್ಡ್‌ ಗೀಚಿ ಅದರ ಮೇಲೆ ಸ್ಮಾರ್ಟ್‌ಫೋನ್‌ನಿಂದ ಸ್ಕ್ಯಾನ್‌ ಮಾಡಿದರೆ ಅದರ ವಿವರಗಳು ಮೊಬೈಲ್‌ನಲ್ಲಿ ದಾಖಲಾಗುತ್ತವೆ. 

ಮಾಹಿತಿಗೆ www.neurotags.comಗೆ ಭೇಟಿ ನೀಡಿ.

ನಕಲಿ ಔಷಧಿಗಳಿಗೆ ಕಡಿವಾಣ

ದೇಶದಲ್ಲಿ ಬಳಕೆಗೆ ಬರುತ್ತಿರುವ ಪ್ರತಿ 10 ಔಷಧಿಗಳಲ್ಲಿ ನಾಲ್ಕು ಔಷಧಿಗಳು ನಕಲಿ ಎಂದು ಕೆಲವು ಸಮೀಕ್ಷೆಗಳು ತಿಳಿಸುತ್ತಿವೆ. ಈ ನಕಲಿ ಔಷಧಿಗಳನ್ನು ಪತ್ತೆ ಮಾಡುವುದಕ್ಕಾಗಿ ‘ಡ್ರಗ್‌ ಸೇಫ್‌’ ತಂತ್ರಾಂಶ ಬಳಸಬಹುದು. ಇದರ ಸಹಾಯದಿಂದ ಔಷಧಿ ಬಾಟಲಿ ಮೇಲೆ ಸ್ಕ್ಯಾನ್ ಮಾಡಿ ‘ಆಪ್ಟಿಕಲ್ ಕ್ಯಾರೆಕ್ಟರ್ ರಿಕಗ್ನಿಷನ್’ ಮೂಲಕ ಔಷಧಿ ನಕಲಿಯೊ–ಅಸಲಿಯೊ ಎಂಬುದನ್ನು ಪತ್ತೆ ಮಾಡಬಹುದು. ಈ ಕಿರು ತಂತ್ರಾಂಶ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಕೆಲಸ ಮಾಡುತ್ತದೆ. 

ಸಂಗಾತಿ ವಿಷಯದಲ್ಲೂ!

ಆನ್‌ಲೈನ್‌ನಲ್ಲಿ ‍ಪ‍್ರೊಫೈಲ್‌ ತಯಾರಿಸಿ ಗಂಡು–ಹೆಣ್ಣಿಗಾಗಿ ಹುಡುಕುವುದು ಸಾಮಾನ್ಯ ವಿಷಯ. ಇದಕ್ಕೆ ನೆರವಾಗುವ ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳು ಹಲವು ಇವೆ. ಆದರೆ, ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಮೋಸ ಮಾಡುವವರೂ ಹೆಚ್ಚಾಗುತ್ತಿದ್ದಾರೆ.

ಇಂತಹ ಮೋಸಗಳಿಗೆ ಕಡಿವಾಣ ಹಾಕಿ, ಬಾಳ ಸಂಗಾತಿ ಆಯ್ಕೆಯಲ್ಲಿ ನೆರವಾಗಲು ಬನಿಹಾಲ್ (Banihal)  ತಂತ್ರಾಂಶ ನೆರವಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಈ ಆ್ಯಪ್ ನಕಲಿ ಪ್ರೊಫೈಲ್‌ಗಳ ಜನ್ಮ ಜಾಲಾಡುತ್ತದೆ. ‘ನ್ಯೂರೊಸೈನ್ಸ್’ ನೆರವಿನಿಂದ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಲೂ ನೆರವಾಗುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !