ಥಾಮ್ಸನ್‌ ಟಿವಿ ಬೆಲೆ ಕಡಿತ

7

ಥಾಮ್ಸನ್‌ ಟಿವಿ ಬೆಲೆ ಕಡಿತ

Published:
Updated:

ಬೆಂಗಳೂರು: ಥಾಮ್ಸನ್‌ ಕಂಪನಿಯು ದೀಪಾವಳಿ ಸಂದರ್ಭದಲ್ಲಿ ಮಾರಾಟ ಹೆಚ್ಚಿಸಲು ಬೆಲೆಯಲ್ಲಿ ಶೇ 20ರಷ್ಟು ಕಡಿತ ಮಾಡಿದೆ.

ಫ್ಲಿಪ್‌ಕಾರ್ಟ್‌ನ ‘ಫೆಸ್ಟೀವ್ ಧಮಾಕಾ ಸೇಲ್‌’ನಲ್ಲಿ ಈ  ಬೆಲೆ ಕಡಿತ ಅನ್ವಯವಾಗಲಿದೆ. 1 ಲಕ್ಷ ಸೆಟ್‌ಗಳನ್ನು ಮಾರಾಟ ಮಾಡಿ ಭಾರತದ ಟಿವಿ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಹೊಂದಲು ಕಂಪನಿ ಉದ್ದೇಶಿಸಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರಗೆ ಲಾಭ
ಬೆಂಗಳೂರು: ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, 2ನೇ ತ್ರೈಮಾಸಿಕದಲ್ಲಿ ₹ 27 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ 10 ತ್ರೈಮಾಸಿಕಗಳಲ್ಲಿನ ನಷ್ಟದಿಂದ ಬ್ಯಾಂಕ್‌ ಹೊರ ಬಂದಿದೆ. ನಿವ್ವಳ ಬಡ್ಡಿ ವರಮಾನ ಹಿಂದಿನ ವರ್ಷದ ₹ 963 ಕೋಟಿಗಳಿಂದ ₹ 1,003 ಕೋಟಿಗೆ ಏರಿಕೆಯಾಗಿ, ಶೇ 4ರಷ್ಟು ಚೇತರಿಕೆ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !