ನವದೆಹಲಿ: ‘ತಂಬಾಕಿನ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಸುಂಕ ವಿಧಿಸುವ ಕ್ರಮವು ರೈತರ ಆದಾಯದ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ಮಾರುಕಟ್ಟೆಯಲ್ಲಿ ಮತ್ತಷ್ಟು ಕಳ್ಳಸಾಗಾಣಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ’ ಎಂದು ಅಖಿಲ ಭಾರತ ರೈತ ಸಂಘಗಳ ಒಕ್ಕೂಟ (ಎಫ್ಎಐಎಫ್ಎ) ಶುಕ್ರವಾರ ಹೇಳಿದೆ.

ಕೇಂದ್ರ ಹಣಕಾಸು ಸಚಿವಾಲಯವು ಫೆಬ್ರುವರಿ 1ರಿಂದ ಸಿಗರೇಟಿನ ಉದ್ದದ ಆಧಾರದ ಮೇಲೆ ಪ್ರತಿ 1 ಸಾವಿರ ಸಿಗರೇಟುಗಳಿಗೆ ಹೆಚ್ಚುವರಿಯಾಗಿ ₹2,050ರಿಂದ ₹8,500ವರೆಗೆ ಸುಂಕ ವಿಧಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದೆ.

‘ಎಫ್ಎಐಎಫ್ಎ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ನಲ್ಲಿನ ಬೆಳೆಗಾರರನ್ನು ಪ್ರತಿನಿಧಿಸುತ್ತದೆ. ಈ ಸುಂಕ ಹೆಚ್ಚಳವು ರೈತರ ಜೀವನೋಪಾಯಕ್ಕೆ ಧಕ್ಕೆ ತರುವ ರೀತಿಯಲ್ಲಿ ತೀವ್ರ ಏರಿಕೆ ಆಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ಮುರಳಿ ಬಾಬು ತಿಳಿಸಿದ್ದಾರೆ.

ಹೆಚ್ಚಿನ ಸುಂಕದಿಂದ ಸಿಗರೇಟ್ ಬಳಕೆ ಕಡಿಮೆ ಆಗಲಿದೆ. ಇದು ದೇಶೀಯವಾಗಿ ತಂಬಾಕು ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.