ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ಜಿಎಸ್‌ಟಿ ದಿನ’ ಆಚರಣೆ

ಹೊಸ ವ್ಯವಸ್ಥೆ ಜಾರಿಗೆ ಬಂದು 1 ವರ್ಷ ಪೂರ್ಣ
Last Updated 30 ಜೂನ್ 2018, 18:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.

ಭಾರತದತೆರಿಗೆ ವ್ಯವಸ್ಥೆಯಲ್ಲಿನ ಅಭೂತಪೂರ್ವ ಸುಧಾರಣೆಯ ಭಾಗವಾಗಲು ತೆರಿಗೆದಾರರು ಸನ್ನದ್ಧರಾಗಿದ್ದರು ಎನ್ನುವುದನ್ನು ಜಾಗತಿಕ ಸಮುದಾಯಕ್ಕೆ ತಿಳಿಸಲು ಇದೊಂದು ಉತ್ತಮ ನಿದರ್ಶನವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

12ಕ್ಕೂ ಅಧಿಕ ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ‘ಒಂದು ದೇಶ, ಒಂದು ತೆರಿಗೆ’ಯಾಗಿ ಪರಿವರ್ತಿಸಲಾಗಿದೆ. ಈ ಮೂಲಕ ದೇಶವನ್ನು ಆರ್ಥಿಕ ಒಕ್ಕೂಟವಾಗಿ ಪರಿವರ್ತಿಸಿದೆ.

ಜುಲೈ 1 ರಂದುಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯ ವರ್ಷಾಚರಣೆ ಸಂಭ್ರಮವನ್ನು ಆಚರಿಸಲಾಗುವುದು. ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರಲಿದ್ದು, ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾ‍ಪ್‌ ಶುಕ್ಲಾ ಅವರು ಗೌರವ ಅತಿಥಿಯಾಗಿರಲಿದ್ದಾರೆ.

ತೆರಿಗೆ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ಜಾರಿಗೆ ಬಂದಿರುವುದರಿಂದ ಸರ್ಕಾರವಷ್ಟೇ ಅಲ್ಲದೆ, ವರ್ತಕರ ಸಮುದಾಯ, ತೆರಿಗೆ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.

ದೇಶಿ ಆರ್ಥಿಕತೆ ಮೇಲೆ ಇದು ಬಹು ಬಗೆಯಲ್ಲಿ ಪರಿಣಾಮ ಬೀರಿದೆ. ಸಣ್ಣ ವರ್ತಕರು, ರಫ್ತುದಾರರು, ಉದ್ಯಮಿಗಳು, ಕೃಷಿ, ಕೈಗಾರಿಕೆ ಮತ್ತು ಸಾಮಾನ್ಯ ಗ್ರಾಹಕರು ಇದರ ಪ್ರಭಾವಕ್ಕೆ ಒಳಗಾಗಿದ್ದಾರೆ. ಹಳೆಯ ತೆರಿಗೆ ಪದ್ಧತಿಗೆ ಬದಲಾಗಿ ಸ್ವಯಂ ಘೋಷಣೆಯ ಮಾದರಿಯ ಬದಲಾವಣೆ ಆಗಿರುವುದು ಐತಿಹಾಸಿಕ ಘಟನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT