ನವದೆಹಲಿ: ಕೇಂದ್ರೀಯ ಬ್ಯಾಂಕರ್‌ಗಳ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ರೇಟಿಂಗ್ ಪಡೆದಿದ್ದಕ್ಕಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ‘ಇದು ದಾಸ್ ನಾಯಕತ್ವದ ಮನ್ನಣೆ’ ಎಂದು ಶ್ಲಾಘಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ‘ಈ ಸಾಧನೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಅಭಿನಂದನೆಗಳು. ಇದು ಆರ್‌ಬಿಐನಲ್ಲಿ ಅವರ ನಾಯಕತ್ವ ಮತ್ತು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಸಾಧಿಸಿದ ಗುರುತಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಯುಎಸ್ ಮೂಲದ ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್‌ನಿಂದ ದಾಸ್ ಸತತ ಎರಡನೇ ವರ್ಷ ಜಾಗತಿಕವಾಗಿ ಅಗ್ರ ಕೇಂದ್ರೀಯ ಬ್ಯಾಂಕರ್ ಆಗಿ ಸ್ಥಾನ ಪಡೆದಿದ್ದಾರೆ.