ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೀಸೆಲ್‌ ವಾಹನ ಬೆಲೆ ಶೇ 20ರವರೆಗೆ ಹೆಚ್ಚಲಿದೆ’

ಜಿಎಸ್‌ಟಿ ಇಳಿಕೆಗೆ ಟೊಯೋಟ ಒತ್ತಾಯ
Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ‘ಮಾಲಿನ್ಯ ನಿಯಂತ್ರಣದ ಹೊಸ ಮಾನದಂಡ ‘ಬಿಎಸ್‌–6’ನಿಂದಾಗಿ ಡೀಸೆಲ್‌ ಎಂಜಿನ್ ವಾಹನಗಳ ಬೆಲೆಯಲ್ಲಿ ಶೇ 15–20ರವರೆಗೆ ಏರಿಕೆಯಾಗಲಿದೆ’ ಎಂದು ಟೊಯೋಟ ಕಿರ್ಲೋಸ್ಕರ್‌ ಮೋಟರ್‌ನ (ಟಿಕೆಎಂ) ಉಪ ವ್ಯವಸ್ಥಾಪಕ ನಿರ್ದೇಶಕ ಎನ್‌.ರಾಜಾ ಹೇಳಿದ್ದಾರೆ.

ದೇಶದಾದ್ಯಂತ 2020ರ ಏಪ್ರಿಲ್‌ 1 ರಿಂದಬಿಎಸ್‌–6 ಮಾನದಂಡ ಜಾರಿಗೆ ಬರಲಿದೆ.ಕಂಪನಿಯ ಜನಪ್ರಿಯ ಮಾದರಿಗಳಾದ ಇನೋವಾ ಮತ್ತು ಫಾರ್ಚುನರ್‌ ಡೀಸೆಲ್‌ ಎಂಜಿನ್‌ ಹೊಂದಿವೆ. 2019ರ ಜನವರಿ–ಜುಲೈ ಅವಧಿಯಲ್ಲಿ ಕಂಪನಿಯ ಒಟ್ಟಾರೆ ವಾಹನ ಮಾರಾಟದಲ್ಲಿ ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಇರುವ ವಾಹನಗಳ ಅನುಪಾತ 82:18 ಇದೆ.ಪ್ರಯಾಣಿಕ ಕಾರುಗಳಲ್ಲಿ ಪೆಟ್ರೋಲ್‌–ಡೀಸೆಲ್‌ ಎಂಜಿನ್‌ ಇರುವ ವಾಹನಗಳ ಅನುಪಾತ 50:50 ಇದೆ.

ಜಿಎಸ್‌ಟಿ ತಗ್ಗಿಸಿ: ಜನರ ಖರೀದಿ ಸಾಮರ್ಥ್ಯ ಇಳಿಕೆಯಾಗಿದೆ. ಹೀಗಾಗಿ ವಿನಿಮಯ ದರದಲ್ಲಿ ಇಳಿಕೆ ಆಗುವುದರಿಂದ ವಾಹನ ಖರೀದಿ ಹೆಚ್ಚಾಗಲು ಸಾಧ್ಯವಿಲ್ಲ. ಜಿಎಸ್‌ಟಿ ದರದಲ್ಲಿ ಇಳಿಕೆಯಂತಹ ದೀರ್ಘಾವಧಿಯ ಸಾಂಸ್ಥಿಕ ಬದಲಾವಣೆಗಳು ಆಗಬೇಕಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾರಾಟ ಕುಸಿತ ಮತ್ತು ಉದ್ಯೋಗ ನಷ್ಟದ ಸಮಸ್ಯೆಯಿಂದ ಹೊರಬರಲುಜಿಎಸ್‌ಟಿಯನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸುವಂತೆ ವಾಹನ ಮತ್ತು ಬಿಡಿಭಾಗ ತಯಾರಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದೇ ತಿಂಗಳ 20ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT